ಬೆಂಗಳೂರು : ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಅನ್ನೋ ಸುದ್ದಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿತ್ತು. ಇದೀಗ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ನಡೆಯೋದು ಫಿಕ್ಸ್ ಆಗಿದೆ. ಕೊನೆಗೂ ಕಾಂಗ್ರೆಸ್ನ ಪವರ್ ಶೇರಿಂಗ್ ಸೀಕ್ರೆಟ್ ನಿಜವಾಗುತ್ತೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ತಿದ್ದಾರೆ. ಸಿದ್ದರಾಮಯ್ಯ ಅವರು ಸದ್ದಿಲ್ಲದೇ ಕುರ್ಚಿಯಿಂದ ಇಳಿತಿದ್ದಾರೆ.

ಹೌದು.. ಸಿದ್ದು ಕಾಂಗ್ರೆಸ್ ಹೈಕಮಾಂಡ್ನ ಮಾತಿಗೆ ತಲೆ ಬಾಗ್ತಾರೆ. ಗಪ್ಚುಪ್ ಆಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ತಾರೆ ಅನ್ನೋ ಮಾತು ನಿಜವಾಗ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸಚಿವ ಸತೀಶ್ ಜಾರಕಿಹೊಳಿಗೆ ಬುಲಾವ್ ಕೊಟ್ಟಿದ್ದು, ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ತೆರಳಲಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಭೇಟಿಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ನನಗೇನು ಗೊತ್ತಿಲ್ಲ ಅಂತಾ ಹೇಳಿಯೇ ಸಚಿವ ಸತೀಶ್ ದೆಹಲಿಯತ್ತ ಪ್ರಯಾಣ ಬೆಳೆಸಲು ರೆಡಿಯಾಗಿದ್ದಾರೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ರಾಹುಲ್ ಗಾಂಧಿ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ AICC ಅಧ್ಯಕ್ಷ ಮಲ್ಲಿಕಾರ್ಜುನ್ ಭೇಟಿ ಮಾಡಲಿದ್ದಾರೆ. ಜಾರಕಿಹೊಳಿ ಜೊತೆ 5 ಮಂತ್ರಿಗಳು ಸಾಥ್ ಕೊಟ್ಟಿದ್ದು, ಇಂದಿನಿಂದ 3 ದಿನಗಳ ಕಾಲ ಸತೀಶ್ ಜಾರಕಿಹೊಳಿ ದೆಹಲಿಯಲ್ಲೇ ಇರಲಿದ್ದಾರೆ. ಸತೀಶ್ ಜಾರಕಿಹೊಳಿ ವಾಪಸ್ ಆಗ್ತಿದ್ದಂತೆ ಕಾಂಗ್ರೆಸ್ನಲ್ಲಿ ಕಾಂತ್ರಿ ಶುರುವಾಗಲಿದೆ.

ನವೆಂಬರ್ 25ರಂದು KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಿಸೈನ್ ಮಾಡಲಿದ್ದು, ಅಂದೇ ಸಚಿವ ಸತೀಶ್ ಜಾರಕಿಹೊಳಿಗೆ KPCC ಅಧ್ಯಕ್ಷರಾಗಿ ಪಟ್ಟಾಭಿಷೇಕ ಮಾಡಲಾಗುತ್ತದೆ. ನವೆಂಬರ್ 26ರಂದು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದು, ಅಂದೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅದೇ ವೇದಿಕೆಯಲ್ಲೇ ಡಾ.ಯತೀಂದ್ರ ಸಿದ್ದರಾಮಯ್ಯ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಒಂದು ವಾರದಲ್ಲೇ ಸಂಪುಟ ಸರ್ಜರಿ ನಡೆಯಲಿದ್ದು, 10 ಮಂದಿ ಹೊಸಬರನ್ನ ಸಚಿವರಾಗಿ ನೇಮಿಸಲು ಹೈಕಮಾಂಡ್ ನಿರ್ಧಾರ ಮಾಡಿದೆ. ಕ್ರಿಮಿನಲ್ ಆರೋಪ, ಭೂಗಳ್ಳತನ ಆರೋಪವಿರುವವರನ್ನು ಕೆಳಗಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ಸಿದ್ದರಾಮಯ್ಯ ಪ್ರೋಟೋಕಾಲ್ನಲ್ಲಿ ಯಾವುದೇ ಬದವಲಾವಣೆ ಇಲ್ಲ. ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣ ಹಾಗೂ ಕಾವೇರಿಯಲ್ಲೇ ಇರ್ತಾರೆ. ಸಿದ್ದರಾಮಯ್ಯ ಬಳಿಯಿರೋ ಎಲ್ಲಾ ಖಾತೆಗಳು ಡಿಕೆಶಿಗೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ. ಯತೀಂದ್ರ ಸಿದ್ದರಾಮಯ್ಯಗೆ ಸಂಪುಟದಲ್ಲಿ ಬಂಪರ್ ಕೊಡುಗೆ ಸಿಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯ ಸಂಫೂರ್ಣ ಹೊಣೆ ಯತೀಂದ್ರ ಸಿದ್ದರಾಮಯ್ಯ ಹೆಗಲಿಗೆ ಬೀಳಲಿದೆ. ಡಿಕೆಶಿ ನಾಯಕತ್ವದಲ್ಲಿ ಯತೀಂದ್ರ ಪವರ್ ಫುಲ್ ಸ್ಥಾನದಲ್ಲಿ ಇರಲಿದ್ದಾರೆ.
ಇದನ್ನೂ ಓದಿ : ಟೈಮ್ ಪಾಸ್ ಪ್ರೀತಿ ಬೇಡ, ಮದುವೆ ಆಗೋಣ ಎಂದಿದಕ್ಕೆ ಮಹಿಳೆ ಕೊಲೆ – ಏಳೆಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯಕರ!







