ಟೈಮ್ ಪಾಸ್ ಪ್ರೀತಿ ಬೇಡ, ಮದುವೆ ಆಗೋಣ ಎಂದಿದಕ್ಕೆ ಮಹಿಳೆ ಕೊಲೆ – ಏಳೆಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯಕರ!

ಬೆಂಗಳೂರು : ಟೈಮ್ ಪಾಸ್ ಪ್ರೀತಿ ಎಲ್ಲಾ ಬೇಡ, ಮದುವೆ ಆಗೋಣ ಎಂದಿದಕ್ಕೆ ಮಹಿಳೆಯನ್ನು ಏಳೆಂಟು ಬಾರಿ ಚಾಕುವಿನಿಂದ ಚುಚ್ಚಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ. ರೇಣುಕಾ (40) ಹತ್ಯೆಯಾದ ಮಹಿಳೆ, ಕುಟ್ಟಿ(43) ಆರೋಪಿ.

ಕೆ.ಜಿ ಹಳ್ಳಿ ನಿವಾಸಿ ಕುಟ್ಟಿ ಫೈನಾನ್ಸ್ ಕೆಲಸ ಮಾಡಿಕೊಂಡಿದ್ದ. ಮೃತ ಮಹಿಳೆ ರೇಣುಕಾಗೆ ಮೊದಲೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ಕುಟ್ಟಿ ಮದುವೆಯಾಗಿದ್ದು, ಸಂಸರಾಸ್ಥನಾಗಿದ್ದ. ಬಹುತೇಕ ಒಂದೇ ಏರಿಯಾ ಆಗಿದ್ದರಿಂದ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿಯೂ ಬೆಳೆದಿತ್ತು. ನಂತರ ಈ ಜೋಡಿ ದೈಹಿಕವಾಗಿ ಸಂಪರ್ಕ ಹೊಂದಿದ್ದರು. ದಿನ ಕಳೆದಂತೆ ರೇಣುಕಾ ಮದುವೆಯಾಗೋಣ, ಹೀಗೆ ಕದ್ದು ಮುಚ್ಚಿ ಓಡಾಡೋದು ಬೇಡ ಎಂದಿದ್ದಳು.‌ ಇದಕ್ಕೆ ಕುಟ್ಟಿ ವಿರೋಧ ವ್ಯಕ್ತ ಪಡಿಸಿದ್ದ.

ಶುಕ್ರವಾರ ರೇಣುಕಾ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಳು. ನಿನ್ನ ಬಳಿ ಮಾತನಾಡಬೇಕು ಎಂದು ಹೇಳಿ ಶುಕ್ರವಾರ ಪಿಳ್ಳಣ್ಣ ಗಾರ್ಡನಾ ಬಳಿಯ ಸರ್ಕಾರಿ ಶಾಲೆಯ ಬಳಿಗೆ ಕರೆದೊಯ್ದಿದ್ದ. ಸಾರ್ವಜನಿಕವಾಗಿ ರೇಣುಕಾಳ ಮೇಲೆ ಹಲ್ಲೆ ನಡೆಸಿ, ಏಳೆಂಟು ಬಾರಿ ಇರಿದು ಕೊಂದು ಅಲ್ಲಿಂದ ಎಸ್ಕೇಪ್ ಆಗಿದ್ದ.

ಕೂಡಲೇ ಸ್ಥಳಿಯರು ಅಂಬೇಡ್ಕರ್ ಆಸ್ಪತ್ರೆಗೆ ರೇಣುಕಾಳನ್ನು ಕರೆದೊಯ್ದಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ರೇಣುಕಾ ಸಾವನ್ನಪ್ಪಿದ್ದಾಳೆ. ಇದೀಗ ಆರೋಪಿ ಕುಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

Btv Kannada
Author: Btv Kannada

Read More