ಸಿಗ್ನಲ್​​ನಲ್ಲಿ ನಿಂತಿದ್ದ 3 ಬೈಕ್​ಗಳಿಗೆ ಆಂಬ್ಯುಲೆನ್ಸ್​ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು!

ಬೆಂಗಳೂರು : ಸಿಗ್ನಲ್​​ನಲ್ಲಿ ನಿಂತಿದ್ದ 3 ಬೈಕ್​ಗಳಿಗೆ ಆಂಬ್ಯುಲೆನ್ಸ್​ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಾಂತಿನಗರದ ಡಬಲ್ ರೋಡ್‌ನ ಸಂಗೀತ ಸಿಗ್ನಲ್ ಬಳಿ ನಡೆದಿದೆ. ಇಸ್ಮಾಯಿಲ್ (ಗಂಡ), ಸಮೀನ್ ಭಾನು (ಹೆಂಡತಿ) ಮೃತರು ದುರ್ದೈವಿಗಳು.

ರಿಚ್ಮಂಡ್​ ಸರ್ಕಲ್​ ಕಡೆಯಿಂದ ಬರ್ತಿದ್ದ ಆಂಬ್ಯುಲೆನ್ಸ್ 3 ಬೈಕ್​ಗೆ ಡಿಕ್ಕಿ ಹೊಡೆದಿದ್ದು, 50 ಮೀಟರ್ ದೂರ ಬೈಕ್​ಗಳನ್ನ ಎಳೆದೊಯ್ದಿದೆ. ಕೊನೆಗೆ ಅಂಬುಲೆನ್ಸ್‌ ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಡ್ರೋಲ್ ಯುನಿಟ್‌ಗೆ ಗುದ್ದಿದೆ. ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದಿದ್ದಕ್ಕೆ ಅಪಘಾತ ಸಂಭವಿಸಿದ್ದು, ಈ ಅಪಘಾತ ಬಳಿಕ ಆಂಬ್ಯುಲೆನ್ಸ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ : ಆಳಂದ ಮತಗಳ್ಳತನ ಪ್ರಕರಣ – ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್​​ಗೆ ನಿರೀಕ್ಷಣಾ ಜಾಮೀನು ಮಂಜೂರು!

Btv Kannada
Author: Btv Kannada

Read More