ಆಳಂದ ಮತಗಳ್ಳತನ ಪ್ರಕರಣ – ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್​​ಗೆ ನಿರೀಕ್ಷಣಾ ಜಾಮೀನು ಮಂಜೂರು!

ಕಲಬುರಿಗಿ : ಆಳಂದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರ ಹರ್ಷ ಗುತ್ತೇದಾರ್​ಗೆ ನಗರದ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರ ಹರ್ಷ ಗುತ್ತೇದಾರ್ ವಿರುದ್ಧ ಆಳಂದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಡಿಲೀಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ SIT ತಂಡ ತನಿಖೆ ಚುರುಕುಗೊಳಿಸಿತ್ತು. ಇದೀಗ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮತ್ತು ಹರ್ಷ ಗುತ್ತೇದಾರ್​ಗೆ ರಿಲೀಫ್ ಸಿಕ್ಕಿದೆ.

ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ. 1 ಲಕ್ಷ ಮೊತ್ತದ ಬಾಂಡ್ ನೀಡಬೇಕು, ತನಿಖೆಗೆ ಸಹಕಾರ ನೀಡಬೇಕು. ಸಾಕ್ಷಿಗಳ ನಾಶ ಮಾಡಬಾರದು, ಸಾಕ್ಷಿಗಳ ಮೇಲೆ ಒತ್ತಡ ಹೇರಬಾರದು. ಕೋರ್ಟ್​ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗಬಾರದು ಎಂಬುದೂ ಸೇರಿದಂತೆ ನಿಯಮಿತ ಷರತ್ತುಗಳನ್ನು ವಿಧಿಸಿದೆ

ಇದನ್ನೂ ಓದಿ : ಇಬ್ಬರು ಹೆಣ್ಣುಮಕ್ಕಳ ಕತ್ತು ಕುಯ್ದು ತಾಯಿಯಿಂದ ಆತ್ಮಹತ್ಯೆ; ಬೆಟ್ಟದಪುರದಲ್ಲಿ ಭೀಕರ ಘಟನೆ!

Btv Kannada
Author: Btv Kannada

Read More