ಮೈಸೂರು : ತಾಯಿಯೊಬ್ಬರು ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳ ಕತ್ತು ಕುಯ್ದು, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. 3 ವರ್ಷ ಹಾಗೂ 10 ದಿನವಷ್ಟೇ ಆದ ಹಸುಗೂಸು ಹತ್ಯೆಯಾದ ಹೆಣ್ಣು ಮಕ್ಕಳು.

ತಾಯಿ ಸಂಬ್ರನ ಮೊದಲು ಮಕ್ಕಳ ಕತ್ತು ಕುಯ್ದು ಹತ್ಯೆ ಮಾಡಿ, ನಂತರ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಪತಿ ಬೆಂಗಳೂರಿನ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸಂಬ್ರನ ಅವರು ಮಕ್ಕಳೊಂದಿಗೆ ಬೆಟ್ಟದಪುರದಲ್ಲೇ ವಾಸವಾಗಿದ್ದರು.

ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಸಾಮೂಹಿಕ ಆತ್ಮಹತ್ಯೆ ಮತ್ತು ಕೊಲೆಗೆ ಕಾರಣಗಳೇನು ಎಂಬುದರ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಂಗಳೂರಿನ ನಟೋರಿಯಸ್ ರೌಡಿ ಕೇರಳದಲ್ಲಿ ಬರ್ಬರ ಹತ್ಯೆ!
Author: Btv Kannada
Post Views: 481







