ಬೆಂಗಳೂರು : ಇತ್ತೀಚೆಗೆ ಜನರು ಸೋಶಿಯಲ್ ಮೀಡಿಯಾವನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಯಾವುದೇ ಅಪ್ಡೇಟ್ಗಳನ್ನೂ ಫೇಸ್ಬುಕ್, ಇನ್‌ಸ್ಟಾಗ್ರಾಂ ಮೂಲಕವೇ ತಿಳಿದುಕೊಳ್ಳುತ್ತಿದ್ದಾರೆ. ಹಾಗೆಯೇ ಮನರಂಜನಾ ವಾಹಿನಿಗಳು ಕೂಡ ತಮ್ಮ ವೀಕ್ಷಕರಿಗೆ ತಾವು ಪ್ರಸಾರ ಮಾಡುತ್ತಿರುವ ರಿಯಾಲಿಟಿ ಶೋ, ಸೀರಿಯಲ್ ಸೇರಿದಂತೆ ಯಾವುದೇ ಅಪ್ಡೇಟ್ಗಳನ್ನು ಫೇಸ್ಬುಕ್, ಇನ್‌ಸ್ಟಾಗ್ರಾಂ ಮುಖೇನವೇ ಪ್ರೇಕ್ಷಕರಿಗೆ ನೀಡುತ್ತಿದೆ. ಆದರೆ, ಕೆಲವೇ ಕ್ಷಣಗಳ ಹಿಂದಷ್ಟೇ ಕಲರ್ಸ್ ಕನ್ನಡದ ಫೇಸಬುಕ್ ಮತ್ತು ಇನ್‌ಸ್ಟಾಗ್ರಾಂ ಪೇಜ್ಗಳು ದಿಢೀರ್ ಬ್ಲಾಕ್ ಆಗಿದೆ.

ಕಲರ್ಸ್ ಕನ್ನಡ ಬಿಗ್ ಬಾಸ್, ರಿಯಾಲಿಟಿ ಶೋಗಳು ಸೇರಿದಂತೆ, ತಮ್ಮ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಸೀರಿಯಲ್‌ಗಳ ತುಣುಕುಗಳನ್ನು ಪ್ರಸಾರ ಮಾಡುತ್ತಿತ್ತು. ಮಿಲಿಯನ್ ಲೆಕ್ಕದಲ್ಲಿ ಫಾಲೋ ಮಾಡುತ್ತಿದ್ದ ವೀಕ್ಷಕರು ಇದೀಗ ಅಪ್‌ಡೇಟ್ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಪ್ರೇಮಿಗಳು ಪ್ರೋಮೊಗಳನ್ನು ನೋಡದೆ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದೂವರೆಗೂ ಅಪ್‌ಲೋಡ್ ಮಾಡಿದ್ದ ಲಕ್ಷಾಂತರ ವಿಡಿಯೋಗಳು ಡಿಲೀಟ್ ಆಗಿವೆ.

ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ಜಿಯೋ ಪೇಜ್ನಲ್ಲಿ ಲಭ್ಯವಿದ್ದೇವೆ ಎಂದು ಕಲರ್ಸ್ ಕನ್ನಡ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಂ ಖಾತೆ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿರುವುದರಿಂದ ಕಲರ್ಸ್ ಕನ್ನಡದ ವಾಟ್ಸಾಪ್ ಚಾನೆಲ್ನಲ್ಲಿ ಪ್ರೋಮೊಗಳನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಬಿಗ್ ಬಾಸ್ ಕನ್ನಡದ ಪ್ರೇಮಿಗಳು ಅಲ್ಲಿ ಅಪ್‌ಡೇಟ್ ಪಡೆದುಕೊಳ್ಳುವ ಜೊತೆಗೆ ಪ್ರೋಮೊ ವೀಕ್ಷಣೆ ಮಾಡಬಹುದು.
ಇದನ್ನೂ ಓದಿ : ಮಂಗಳೂರಿನ ನಟೋರಿಯಸ್ ರೌಡಿ ಕೇರಳದಲ್ಲಿ ಬರ್ಬರ ಹತ್ಯೆ!







