ಕನ್ನಡ ರಾಜ್ಯೋತ್ಸವದಂದು ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ – ಯೆಲ್ಲೋ ಮಾರ್ಗದಲ್ಲಿ 5ನೇ ರೈಲು ಸಂಚಾರ ಆರಂಭ!

ಬೆಂಗಳೂರು : ರಾಜ್ಯಾದ್ಯಂತ ಇಂದು 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕನ್ನಡ ರಾಜ್ಯೋತ್ಸವದ ದಿನದಂದೇ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ 5ನೇ ಹೊಸ ಮೆಟ್ರೋ ರೈಲು ಸಂಚಾರ ಆರಂಭಿಸಿದೆ.

ಆರ್.ವಿ.ರೋಡ್ ಮತ್ತು ಬೊಮ್ಮಸಂದ್ರ ಕಡೆ ತೆರಳುವ ಮೆಟ್ರೋ ರೈಲು ಇದಾಗಿದ್ದು, ಈ ಮೊದಲು ನಾಲ್ಕು ರೈಲು ಸೇವೆ ಇತ್ತು. ಇಂದಿನಿಂದ ಐದು ಮೆಟ್ರೋ ಸೇವೆ ಯೆಲ್ಲೋ ಲೈನ್‌ನಲ್ಲಿ ಲಭ್ಯವಿರಲಿದೆ. ಯೆಲ್ಲೋ ಲೈನ್‌ನಲ್ಲಿ ಪೀಕ್ ಅವರ್‌ನಲ್ಲಿ ರೈಲುಗಳು ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸಲಿವೆ.

ಹಿಂದಿನಂತೆ 19 ನಿಮಿಷಗಳ ಬದಲು ಈಗ 15 ನಿಮಿಷಕ್ಕೆ ಮೆಟ್ರೋ ಸೇವೆ ಇರಲಿದೆ. ಈ ಬದಲಾವಣೆ ಎಲ್ಲ ದಿನಗಳಿಗೂ ಅನ್ವಯವಾಗಲಿದೆ. ಮೊದಲ ಹಾಗೂ ಕೊನೆಯ ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರಿಂದ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಲಿದೆ.

ಇದನ್ನೂ ಓದಿ : ಸೈಡ್ ಕೊಡದಿದ್ದಕ್ಕೆ ಚಾಲಕನ ಕಿರಿಕ್ – ಬೈಕ್‌ಗೆ ಕ್ಯಾಬ್ ಗುದ್ದಿಸಿ ದುಂಡಾವರ್ತನೆ!

Btv Kannada
Author: Btv Kannada

Read More