ಸೈಡ್ ಕೊಡದಿದ್ದಕ್ಕೆ ಚಾಲಕನ ಕಿರಿಕ್ – ಬೈಕ್‌ಗೆ ಕ್ಯಾಬ್ ಗುದ್ದಿಸಿ ದುಂಡಾವರ್ತನೆ!

ಬೆಂಗಳೂರು : ಸೈಡ್‌ ಕೊಡದಿದ್ದಕ್ಕೆ ಬೈಕ್‌ಗೆ ಕಾರು ಗುದ್ದಿಸಿ ಕ್ಯಾಬ್‌ ಚಾಲಕ ದುಂಡಾವರ್ತನೆ ತೋರಿದ ಘಟನೆ ನಗರದ ಕೆ.ಆರ್‌ ಪುರದ ಬಳಿ ನಡೆದಿದೆ.

ಸೈಡ್ ಕೊಡುವ ವಿಚಾರಕ್ಕೆ ಕ್ಯಾಬ್‌ ಚಾಲಕ ಹಾಗೂ ಬೈಕ್‌ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ವಲ್ಪ ಮುಂದೆ ಬಂದು ಬೈಕ್ ಸವಾರ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಕ್ಯಾಬ್‌ ಚಾಲಕ ಕಾರಿನಲ್ಲಿ ಬೈಕ್‌ಗೆ ಗುದ್ದಿಸಿ ಸವಾರನನ್ನು ಬೀಳಿಸಿದ್ದಾನೆ. ಕ್ಯಾಬ್ ಚಾಲಕನ ದುಂಡಾವರ್ತನೆ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.

ದುಂಡಾವರ್ತನೆ ತೋರಿದ ಕ್ಯಾಬ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಲೈಟ್ ಹಾಕಿದ ವಿಚಾರಕ್ಕೆ ಗಲಾಟೆ – ಖಾರದ ಪುಡಿ ಎರಚಿ ಸಹೋದ್ಯೋಗಿಯ ಹತ್ಯೆ!

Btv Kannada
Author: Btv Kannada

Read More