ಲೈಟ್ ಹಾಕಿದ ವಿಚಾರಕ್ಕೆ ಗಲಾಟೆ – ಖಾರದ ಪುಡಿ ಎರಚಿ ಸಹೋದ್ಯೋಗಿಯ ಹತ್ಯೆ!

ಬೆಂಗಳೂರು : ಸಣ್ಣಪುಟ್ಟ ವಿಚಾರಗಳಿಗೆ ಹೀಯಾಳಿಸುತ್ತಿದ್ದ ವ್ಯಕ್ತಿಯನ್ನು ಆತನ ಸಹೋದ್ಯೋಗಿಯೇ ಖಾರದ ಪುಡಿ ಎರಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರದ ಕನಕ ನಗರದಲ್ಲಿ ನಡೆದಿದೆ. ಭೀಮೇಶ್ ಬಾಬು (41) ಕೊಲೆಯಾದ ವ್ಯಕ್ತಿ.

ಭೀಮೇಶ್ ಬಾಬು
                      ಭೀಮೇಶ್ ಬಾಬು

ಭೀಮೇಶ್ ಮತ್ತು ಸೋಮಲವಂಶಿ ಇಬ್ಬರೂ ಡಾಟಾ ಡಿಜಿಟಲ್ ಬ್ಯಾಂಕ್​ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕೊಲೆಯಾದ ಭೀಮೇಶ್ ಬಾಬು ತಮ್ಮ ಸಹೋದ್ಯೋಗಿ ಸೋಮಲವಂಶಿಯನ್ನು ಸಣ್ಣಪುಟ್ಟ ವಿಷಯಗಳಿಗೂ ಆಗಾಗ ಹೀಯಾಳಿಸುತ್ತಿದ್ದರು. ಅಲ್ಲದೆ, ಕೆಲಸದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ‘ಲೈಟ್ ಹಾಕಿದ ವಿಚಾರಕ್ಕೆ’ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಸೋಮಲವಂಶಿ, ಭೀಮೇಶ್ ಬಾಬು ಅವರ ಮೇಲೆ ಖಾರದ ಪುಡಿ ಎರಚಿ ಹತ್ಯೆ ಮಾಡಿದ್ದಾರೆ.

ಸೋಮಲವಂಶಿ
        ಸೋಮಲವಂಶಿ

ಕೊಲೆ ಮಾಡಿದ ಬಳಿಕ ಆರೋಪಿ ಸೋಮಲವಂಶಿ ತಾನಾಗಿಯೇ ಗೋವಿಂದರಾಜನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆಯಲ್ಲಿ ಭಾರೀ ಗೋಲ್ಮಾಲ್ – ಕೆ.ಆರ್.ನಗರ ತಹಶೀಲ್ದಾರ್ ವಿರುದ್ಧ ದೂರು!

Btv Kannada
Author: Btv Kannada

Read More