ವಿಜಯನಗರ : ಪ್ರತಿವರ್ಷ ಪಂಚ ಗ್ಯಾರಂಟಿಗಳಿಗಾಗಿ 55-60 ಸಾವಿರ ಕೋಟಿ ಅನುದಾನ ಬೇಕು, ಹಾಗಾಗಿ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗ್ತಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಕಾಂಗ್ರೆಸ್ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ವಿಜಯನಗರ ಸಚಿವ ಜಮೀರ್ ಮಾತನಾಡಿ, ಗ್ಯಾರಂಟಿಗಳಿಂದ ಕ್ಷೇತ್ರಕ್ಕೆ ಅನುದಾನ ಬರೋದು ಕಷ್ಟ ಆಗ್ತಿದೆ. ಇದೇ ನ.9 ರಂದು ಸಿಎಂ ಸಿದ್ದರಾಮಯ್ಯ ಕೂಡ್ಲಿಗಿಗೆ ಬರ್ತಾರೆ. ಇಲ್ಲಿನ MLA ಉತ್ತಮ ಕೆಲಸ ಮಾಡ್ತಿದ್ದಾರೆ ಎಂದು MLA ಡಾ.ಎನ್.ಟಿ ಶ್ರೀನಿವಾಸ್ ಹೊಗಳೋ ಭರದಲ್ಲಿ ಗ್ಯಾರಂಟಿಯಿಂದ ಅನುದಾನ ಬರೋಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಹಿನ್ನೆಲೆ ಅನುದಾನದ ಜಟಾಪಟಿ ಶುರುವಾಗಿದ್ದು, ಇದೀಗ ಹಾಗಾದರೆ ಗ್ಯಾರಂಟಿಗಳ ಹೊರೆಯಿಂದ ಸರ್ಕಾರದ ಖಜಾನೆ ಖಾಲಿ ಆಗಿದ್ಯಾ? ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬಳಿ ಅನುದಾನವೇ ಇಲ್ವಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆಯಲ್ಲಿ ಭಾರೀ ಗೋಲ್ಮಾಲ್ – ಕೆ.ಆರ್.ನಗರ ತಹಶೀಲ್ದಾರ್ ವಿರುದ್ಧ ದೂರು!







