ಶೇ.15ರವರೆಗೆ ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಸಕ್ರಮಕ್ಕೆ ದಂಡ ಸ್ಕೀಂ – ದಂಡದ ಪ್ರಮಾಣ ಹೇಗೆ? ಇಲ್ಲಿದೆ ಮಾಹಿತಿ!

ಬೆಂಗಳೂರು : ರಾಜ್ಯದ ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದ್ದರೂ ದಂಡವನ್ನು ಕಟ್ಟಿಸಿಕೊಂಡು ವಿನಾಯ್ತಿ ನೀಡುವುದಕ್ಕೆ ಸರ್ಕಾರ ಅಸ್ತು ಎಂದಿದೆ. ಕಟ್ಟಡ ನಿರ್ಮಾಣ ಪರವಾನಗಿಯ (ನಕ್ಷೆ) ಶೇ 15ರವರೆಗಿನ ಉಲ್ಲಂಘನೆಯನ್ನು ಸಕ್ರಮ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಮಹಾನಗರ ಪಾಲಿಕೆ (ತಿದ್ದುಪಡಿ) ಕಾಯ್ದೆ 2025ರ ಕಲಂ 299-ಎಬಿ (2) (ಐ) ಹಾಗೂ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಕಾಯ್ದೆ 2025ರ ಕಲಂ 187 (1-ಎ)ಯಂತೆ ಕಟ್ಟಡ ನಕ್ಷೆ ಉಲ್ಲಂಘನೆಗೆ ದಂಡ ವಿಧಿಸಿ, ಪರಿಷ್ಕೃತ ನಕ್ಷೆ ನೀಡಲಾಗುತ್ತದೆ. ಮಂಜೂರಾಗಿರುವ ಕಟ್ಟಡ ನಕ್ಷೆಯಲ್ಲಿ ಸೆಟ್‌ಬ್ಯಾಕ್​ನಲ್ಲಿ ಶೇ 15ರಷ್ಟು ಉಲ್ಲಂಘಿಸಿದವರಿಗೆ ಪ್ರತಿ ಚದರ ಮೀಟರ್‌ಗೆ ದಂಡ ಶುಲ್ಕವನ್ನು ನಿಗದಿ ಮಾಡಲಾಗಿದೆ. ಆಯಾ ಕಟ್ಟಡಗಳ ಉಲ್ಲಂಘನೆಯನ್ನು ಪರಿಗಣಿಸಿ, ದಂಡ ಪಾವತಿಸಿಕೊಂಡು ಕಟ್ಟಡಗಳಿಗೆ ಪರಿಷ್ಕೃತ ನಕ್ಷೆಯನ್ನು ಕೊಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಕಟ್ಟಡ ನಕ್ಷೆ ಪಡೆದು ಫ್ಲೋರ್ ಏರಿಯಾ ರೇಷಿಯೊ (ಎಫ್‌ಎಆರ್) ಮತ್ತು ಕಾರು ಪಾರ್ಕಿಂಗ್ ಪ್ರದೇಶಗಳ ಉಲ್ಲಂಘನೆ ಶೇ 5ರ ಮಿತಿಯಲ್ಲಿದ್ದರೆ ಅದಕ್ಕೂ ದಂಡ ವಿಧಿಸಿ, ಪರಿಷ್ಕೃತ ನಕ್ಷೆಗಳನ್ನು ನೀಡಬಹುದು ಎಂದು ಸೂಚಿಸಲಾಗಿದೆ.

ದಂಡದ ಪ್ರಮಾಣ ಹೇಗೆ?

ಪಟ್ಟಣಪಂಚಾಯಿತಿ ವ್ಯಾಪ್ತಿ
ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,000 ರೂ. ದಂಡ
ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ರೂ. ದಂಡ ನಿಗದಿ

ಪುರಸಭೆ ವ್ಯಾಪ್ತಿ

ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,200 ರೂ. ದಂಡ
ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,800 ರೂ. ದಂಡ

ನಗರಪಾಲಿಕೆ ವ್ಯಾಪ್ತಿ

ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ರೂ. ದಂಡ
ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,250 ರೂ. ದಂಡ

ಮಹಾನಗರ ಪಾಲಿಕೆ ವ್ಯಾಪ್ತಿ
ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,000 ರೂ. ದಂಡ ನಿಗದಿ
ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 3,000 ರೂ. ದಂಡ

ಇದನ್ನೂ ಓದಿ : ರಾಮನಗರ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ – 130ಕ್ಕೂ ಹೆಚ್ಚು ಮಂದಿ ಅರೆಸ್ಟ್!

Btv Kannada
Author: Btv Kannada

Read More