ರಾಮನಗರ : ಹೋಮ್ ಸ್ಟೇ ಒಂದರಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಜನರನ್ನು ಅರೆಸ್ಟ್ ಮಾಡಿದ್ದಾರೆ.

ತಡರಾತ್ರಿ ಹೋಮ್ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಪಾರ್ಟಿಯಲ್ಲಿ ಇದ್ದವರೆಲ್ಲಾ ಬೆಂಗಳೂರು ಮೂಲದವರು ಆಗಿದ್ದು 150ಕ್ಕೂ ಹೆಚ್ಚು ಜನರು ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಪೊಲೀಸರು ರೇಡ್ ಮಾಡಿದಾಗ ಪಾರ್ಟಿಯಲ್ಲಿ ಭಾಗಿಯಾದ 130 ಜನರನ್ನು ಬಂಧಿಸಿದ್ದಾರೆ.
ಸದ್ಯ ಬಂಧಿತರನ್ನು ಮೆಡಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಮಧ್ಯರಾತ್ರಿ 3 ಗಂಟೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆರೋಪ ಇರುವ ಕಾರಣ ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲರಿಗೂ ಮೆಡಿಕಲ್ ಟೆಸ್ಟ್ ನಡೆಸಲಾಗುತ್ತಿದೆ.
ಇದನ್ನೂ ಓದಿ : ಮೆಹಬೂಬ ಮುನವಳ್ಳಿ, ನಿಜಗುಣಿ ಸೇರಿದಂತೆ ಪತ್ರಕರ್ತರಿಗೆ ಧೀಮಂತ ಪ್ರಶಸ್ತಿ ಘೋಷಣೆ!
Author: Btv Kannada
Post Views: 221







