ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಪ್ರತಿಷ್ಠಿತ IISC ಸಂಸ್ಥೆಯಿಂದ ಅಪಮಾನ?

ಬೆಂಗಳೂರು : ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ಮಧ್ಯೆ ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಪ್ರತಿಷ್ಠಿತ ಸಂಸ್ಥೆಯಿಂದ ಅಪಮಾನವಾಗಿರುವ ಆರೋಪ ಕೇಳಿಬಂದಿದೆ.

ಕನ್ನಡದ ಅಸ್ಮಿತೆಯ ಬಣ್ಣಗಳನ್ನು ಫುಟ್ ಪಾತ್​​ಗೆ ಲೇಪಿಸಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​​ ಕನ್ನಡಕ್ಕೆ ಅವಮಾನ ಮಾಡಿದೆ. IISC ಸಂಸ್ಥೆಯ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿಯೇ ಫುಟ್ ಪಾತ್​​ಗೆ ಹಳದಿ & ಕೆಂಪು ಬಣ್ಣ ಬಳಿದಿದೆ. ಸಂಸ್ಥೆಯಲ್ಲಿರುವ ಕನ್ನಡ ಉದ್ಯೋಗಿಗಳ ಆಕ್ರೋಶದ ಹೊರತಾಗಿಯೂ ಈ ಬಣ್ಣ ಬಳಿದಿದ್ದಾರೆ.

IISC ಆಡಳಿತ ಕನ್ನಡ ರಾಜ್ಯೋತ್ಸವದ ಆಚರಣೆಗೂ ಅವಕಾಶ ನೀಡಿಲ್ಲ. ಪ್ರತಿ ಬಾರಿಯಂತೆ IISC ಈ ಬಾರಿಯೂ ಕನ್ನಡ ನೌಕರರಿಗೆ ನಿರಾಸೆ ಮೂಡಿಸಿದ್ದು, ದಿನನಿತ್ಯ ಹಳದಿ & ಕೆಂಪು ಬಣ್ಣ ಬಳಿದ ಫುಟ್ ಪಾತ್ ಮೇಲೆ ಉದ್ಯೋಗಿಗಳು ಓಡಾಡುತ್ತಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್​ನಲ್ಲಿ ಅನ್ಯಭಾಷಿಗರೇ ಹೆಚ್ಚಾಗಿದ್ದು, ಇದೀಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. IISC ಆಡಳಿತ ಕೋಟಿ ಕೋಟಿ ಕನ್ನಡಿಗರ ಕ್ಷಮೆ ಕೇಳುವಂತೆ ಸಂಘಟನೆಗಳು ಆಗ್ರಹಿಸಿದೆ.

ಇದನ್ನೂ ಓದಿ : ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ – ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ!

Btv Kannada
Author: Btv Kannada

Read More