ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ – ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ!

ಬೆಂಗಳೂರು : ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಇದೀಗ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. A ಖಾತಾ, B ಖಾತಾ ಬಳಿಕ ಸರ್ಕಾರ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಟ್ಟಡ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದಲ್ಲಿ ಪರವಾನಗಿ ಉಲ್ಲಂಘನೆ ಮಾಡಿ ಕಟ್ಟಿದ ಕಟ್ಟಡಗಳಿಗೆ ಸರ್ಕಾರ ವಿನಾಯಿತಿ ಘೋಷಿಸಿದೆ. ರಾಜ್ಯ ಸರ್ಕಾರ ದಂಡ ಕಟ್ಟಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ ನೀಡಿದ್ದು, ಶೇಕಡಾ 15 ರ ಮಿತಿಯೊಳಗೆ ನಿಯಮ ಉಲ್ಲಂಘಟನೆ ಮಾಡಿದ ಕಟ್ಟಡಗಳಿಗೆ ಮಾತ್ರ ಇದು ಅನ್ವಯ ಆಗಲಿದೆ. ಶೇ.15ರವರೆಗಿನ ಉಲ್ಲಂಘನೆಯ ಬಿಲ್ಡಿಂಗ್​ಗಳು ಇದೀಗ ಸಕ್ರಮವಾಗಲಿದೆ.

ಪರವಾನಗಿ ಪಡೆದು ಸೆಟ್ ಬ್ಯಾಕ್ ಉಲ್ಲಂಘಿಸಿದವರಿಗೆ ಈಗ ಅನುಕೂಲವಾಗಿದ್ದು, ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡಲು ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ. ರಾಜ್ಯದ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ದಂಡ ನಿಗದಿಯಾಗಿದ್ದು, ಪ್ರತಿ ಚದರ ಮೀಟರ್​ಗೆ ಇಂತಿಷ್ಟು ದಂಡ ನಿಗದಿ ಮಾಡಿ ಸಕ್ರಮ ಮಾಡಲಾಗುತ್ತದೆ. ಇದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕೆ ಕಟ್ಟಡಕ್ಕೆ ಅನುಕೂಲವಾಗಿದ್ದು, ಪ್ರತಿ ಚದರ ಮೀಟರ್ ಗೆ 2000 ರೂ ನಿಗದಿ ಮಾಡಿ ಸಕ್ರಮಕ್ಕೆ ಅವಕಾಶ ನೀಡಲಾಗಿದೆ. ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ ಪ್ರತಿ ಚದರ ಮೀಟರ್​ಗೆ 3000 ರೂ ನಿಗದಿ ಮಾಡಿದ್ದು, ಇದು ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳಿಗೂ ಅನ್ವಯವಾಗಲಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ದರ ನಿಗದಿಗೊಳಿಸಿ ಸರ್ಕಾರ ಆದೇಶ ನೀಡಿದೆ.

ಇದನ್ನೂ ಓದಿ : ಕುತೂಹಲ ಮೂಡಿಸಿದ “ಕೊರಗಜ್ಜ”‌ ಸಿನಿಮಾ – ನ.11ಕ್ಕೆ ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಸುದ್ದಿಗೋಷ್ಠಿ!

Btv Kannada
Author: Btv Kannada

Read More