ಮಂಗಳೂರು : ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ನ ಶರಣ್ ಪಂಪ್ವೆಲ್ ಅವರನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.

RSS ಮುಖಂಡರೊಬ್ಬರ ಭಾಷಣದ ವಿಡಿಯೋವನ್ನು ಶರಣ್ ಪಂಪ್ ವೆಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಸಂಬಂಧ ಶರಣ್ ಪಂಪ್ ವೆಲ್ ವಿರುದ್ಧ ಪೊಲೀಸರು FIR ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಶರಣ್ ಪಂಪ್ವೆಲ್ ಅರೆಸ್ಟ್ ಹಿನ್ನೆಲೆ ಶಾಸಕ ವೇದವ್ಯಾಸ್ ಕಾಮತ್ ಗರಂ ಆಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಕಾಮತ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ದರ್ಶನ್ – ಪವಿತ್ರಾ ಮದುವೆಯಾಗಿದ್ರಾ? ಪವಿತ್ರಾ ಕೊರಳಲ್ಲಿ ತಾಳಿ, ಟ್ರೆಡಿಷನ್ ಡ್ರೆಸ್ನಲ್ಲಿರುವ ಜೋಡಿ ಫೋಟೋ ವೈರಲ್!
Author: Btv Kannada
Post Views: 211







