ದರ್ಶನ್ – ಪವಿತ್ರಾ ಮದುವೆಯಾಗಿದ್ರಾ? ಪವಿತ್ರಾ ಕೊರಳಲ್ಲಿ ತಾಳಿ, ಟ್ರೆಡಿಷನ್ ಡ್ರೆಸ್​ನಲ್ಲಿರುವ ಜೋಡಿ ಫೋಟೋ ವೈರಲ್!

ದರ್ಶನ್ : ದರ್ಶನ್ – ಪವಿತ್ರಾ ಗೌಡ ಮದುವೆ ಫೋಟೋಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಇವರು ಸತಿ-ಪತಿ ರೀತಿ ಕಾಣಿಸಿದ್ದಾರೆ. ದರ್ಶನ್ – ಪವಿತ್ರಾ ಮದುವೆ ದಿನದ ಫೋಟೋಸ್ ಎಂದು ನೆಟ್ಟಿಗರು ವೈರಲ್ ಮಾಡ್ತಿದ್ದಾರೆ.

ವೈರಲ್ ಆಗಿರೋ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ ಪಕ್ಕಾ ಮದುಮಕ್ಕಳಂತೆ ಕಂಗೊಳಿಸ್ತಿದ್ದಾರೆ. ಇಬ್ಬರೂ ಟ್ರೆಡಿಷನಲ್ ಡ್ರೆಸ್​ನಲ್ಲಿದ್ದು, ಪವಿತ್ರಾ ಗೌಡ ಕೊರಳಲ್ಲಿ ತಾಳಿ ಕೂಡ ಇದೆ, ಮದುವೆಯ ಸಂಭ್ರಮದಲ್ಲಿ ಜೋಡಿ ನಗುನಗುತ್ತಾ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದೀಗ ದರ್ಶನ್ – ಪವಿತ್ರಗೌಡ ಮದುವೆಯಾಗಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಈ ಫೋಟೋಗಳ ಗದ್ದಲ ಒಂದು ಕಡೆಯಾದರೆ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇನ್ನೊಂದು ಕಡೆ. ಇದೇ ಕೊಲೆ ಕೇಸ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರು ಆರೋಪಿಗಳಾಗಿ ಜೈಲು ಸೇರಿದ್ದಾರೆ. ಇಂತಹ ಗಂಭೀರವಾದ ಕ್ರಿಮಿನಲ್ ಕೇಸ್‌ನ ತನಿಖೆ ನಡೆಯುತ್ತಿರುವಾಗಲೇ ಈ ಫೋಟೋಗಳು ವೈರಲ್ ಆಗಿವೆ.

ಇದನ್ನೂ ಓದಿ : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ಡಾ.ಮಹೇಂದ್ರನ ಪ್ರೇಯಸಿ ಸೇರಿ 8ಕ್ಕೂ ಹೆಚ್ಚು ಮಂದಿಗೆ ತಟ್ಟಿದ ಎನ್​​ಕ್ವೈರಿ ಬಿಸಿ!

Btv Kannada
Author: Btv Kannada

Read More