ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ಡಾ.ಮಹೇಂದ್ರನ ಪ್ರೇಯಸಿ ಸೇರಿ 8ಕ್ಕೂ ಹೆಚ್ಚು ಮಂದಿಗೆ ತಟ್ಟಿದ ಎನ್​​ಕ್ವೈರಿ ಬಿಸಿ!

ಬೆಂಗಳೂರು : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಡಾ.ಕೃತಿಕಾ ರೆಡ್ಡಿ ಪತಿ ಮಹೇಂದ್ರ ರೆಡ್ಡಿಗೆ ಮುಂಬೈನ ಅನೇಕ ಮಹಿಳೆಯರ ಜೊತೆ ಸಂಪರ್ಕ ಇತ್ತು ಅನ್ನೋದು ಬಯಲಾಗಿದ್ದು, ಮಹೇಂದ್ರ ಜೊತೆ ಸಂಪರ್ಕದಲ್ಲಿದ್ದ ಮಹಿಳೆಯರಿಗೆ ಪೊಲೀಸರು ವಿಚಾರಣೆ ನೋಟಿಸ್ ನೀಡಿದ್ದಾರೆ.

ಇದೀಗ ಡಾ.ಮಹೇಂದ್ರನ ಪ್ರೇಯಸಿ ಸೇರಿ 8ಕ್ಕೂ ಹೆಚ್ಚು ಜನರಿಗೆ ಎನ್​​ಕ್ವೈರಿ ಬಿಸಿ ತಟ್ಟಿದ್ದು, ಮಾರತ್ ಹಳ್ಳಿ ಪೊಲೀಸರು ಪ್ರತಿಯೊಬ್ಬರ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಮಹೇಂದ್ರನ ವೈದ್ಯ ಸ್ನೇಹಿತರೊಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಅನಾಸ್ತೇಶಿಯಾ ಎಕ್ಸ್​ಪರ್ಟ್ ವೈದ್ಯರೊಬ್ಬರನ್ನು ಕರೆಸಿ ಮಾಹಿತಿ ಸಂಗ್ರಹಿಸಿದ್ದು,
ಫೋನ್ ರಿಟ್ರೀವ್ ವೇಳೆ ಮುಂಬೈ ಮಹಿಳೆಯರು & ವೈದ್ಯನ ಸಂಪರ್ಕ ಪತ್ತೆಯಾಗಿದೆ.

ಲವ್ವರ್​ ಬಿಟ್ಟು ಯಾರ ಬಳಿಯೂ ಮಹೇಂದ್ರ ಕೊಲೆ‌ ವಿಚಾರ ಹಂಚಿಕೊಳ್ಳಲಿಲ್ಲ. ಇದೀಗ ಪೊಲೀಸರು ಮಹೇಂದ್ರನ ಐ-ಫೋನ್​ನಲ್ಲಿರುವ ಡಾಟಾ ತೆಗೆಯಲು ಮುಂದಾಗಿದ್ದು,
ಹೈದರಾಬಾದ್​ನ ಟೆಕ್ನಿಕಲ್ ಸೆಲ್​ಗೆ ಐ-ಫೋನ್​ ಕಳಿಸಿ ಡಾಟಾ ತೆಗೆಸಲು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ನಟ ದರ್ಶನ್ ಪುತ್ರ ವಿನೀಶ್​ಗೆ ಬರ್ತಡೇ ಸಂಭ್ರಮ – ಇತ್ತ ಹುಟ್ಟುಹಬ್ಬದಂದು ಮಗನನ್ನು ನೋಡಲಾಗದೆ ದಚ್ಚು ಪರದಾಟ!

Btv Kannada
Author: Btv Kannada

Read More