ಬೆಂಗಳೂರು : ನಟ ದರ್ಶನ್ ಪುತ್ರ ವಿನೀಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಅಪ್ಪನಿಲ್ಲದೇ ಮೊದಲ ಬಾರಿಗೆ ವಿನೀಶ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಇತ್ತ ಜೈಲು ಪಾಲಾಗಿರುವ ದರ್ಶನ್ ಬರ್ತಡೇ ದಿನ ಮಗನನ್ನು ನೋಡಲಾಗದೆ ಪರದಾಡುತ್ತಿದ್ದಾರೆ.

ದರ್ಶನ್ ಪ್ರತಿ ವರ್ಷವೂ ವಿಜೃಂಭಣೆಯಿಂದ ಮಗನ ಬರ್ತಡೇ ಆಚರಿಸುತ್ತಿದ್ದರು. ಈ ಬಾರಿ ಮಗನ ಬರ್ತಡೇ ಆಚರಿಸಲಾಗದೆ ದಾಸ ಜೈಲಿನಲ್ಲಿ ಬಂಧಿಯಾಗಿದ್ದು, ಮಗನ ಬರ್ತಡೇ ಬಗ್ಗೆ ದರ್ಶನ್ ಸಹ ಬಂಧಿಗಳ ಜೊತೆ ಹೇಳಿಕೊಂಡಿದ್ದಾರೆ.

ಜೈಲಿನಲ್ಲಿ ದಾಸನಿಗೆ ಮಗನ ಜೊತೆಗೆ ಕಳೆದ ಸುಂದರ ಕ್ಷಣಗಳು ಕಾಡುತ್ತಿದ್ದು, ಇಂದು ದರ್ಶನ್ ಬೆಳಿಗ್ಗೆ 6ಗಂಟೆಗೆ ಎದ್ದು ದೇವರಿಗೆ ನಮಸ್ಕಾರ ಮಾಡಿ, ಬಳಿಕ ಕೆಲಹೊತ್ತು ಬ್ಯಾರಕ್ನಲ್ಲಿ ವಾಕ್ ಮಾಡಿದ್ದಾರೆ. ಮಗನನ್ನ ನೆನೆಯುತ್ತ ಒಂಟಿಯಾಗಿ ಕುಳಿತಿದ್ದು, ಜೈಲಿನಲ್ಲಿ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಕೇಸ್ ತನಿಖಾಧಿಕಾರಿಗಳಿಗೆ ಸಂಕಷ್ಟ – ACP ಚಂದನ್, PSI ವಿನಯ್ ವಿರುದ್ಧವೇ ಸ್ನೇಹಮಯಿ ಕೃಷ್ಣ ದೂರು!
Author: Btv Kannada
Post Views: 174







