ಜೈಲಲ್ಲಿ ದರ್ಶನ್​ಗೆ ನರಕಯಾತನೆ – ಕೆಲವೇ ದಿನಗಳಲ್ಲಿ 12-13 ಕೆ.ಜಿ. ತೂಕ ಇಳಿಕೆ!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನರಕಯಾತನೆ ಅನುಭವಿಸುತ್ತಿದ್ದಾರೆ. ಜೈಲು ಸೇರಿದ ಕೆಲವೇ ದಿನಗಳಲ್ಲಿ ದರ್ಶನ್ ಬರೋಬ್ಬರಿ 12 ರಿಂದ 13 ಕೆ.ಜಿ.ಯಷ್ಟು ತೂಕ ಕಳೆದುಕೊಂಡಿದ್ದಾರೆ.

ನಟ ದರ್ಶನ್‌ ಸದಾ ಚಿಂತೆಗೆ ಬಿದ್ದು ತೂಕ ಇಳಿಕೆಯಾಗಿದೆ. ಈಗಾಗಲೇ ಬೆನ್ನು ನೋವು ಮತ್ತು ಸೊಂಟ ನೋವಿನಿಂದ ಬಳಲುತ್ತಿರುವ ಅವರಿಗೆ, ಜೈಲಿನ ವಾತಾವರಣ ಮತ್ತು ಆಹಾರವು ದೇಹಕ್ಕೆ ಹೊಂದಿಕೊಳ್ಳದೇ ಇರುವುದರಿಂದ ತೂಕ ಇಳಿಕೆಯಾಗಿದೆ. ಆದಾಗ್ಯೂ, ದರ್ಶನ್ ಅವರು ಪರಪ್ಪನ ಅಗ್ರಹಾರದ ಜೈಲಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿರುವ ಕಾರಣ ಅವರ ದಿನಚರಿಯೇ ಸಂಪೂರ್ಣವಾಗಿ ಬದಲಾಗಿದೆ.

ದರ್ಶನ್‌ ಮುಂಜಾನೆಯೇ ಎದ್ದು ವಾಕಿಂಗ್ ಸೇರಿದಂತೆ ಹಲವು ಕೆಲಸಗಳಲ್ಲಿ ನಿರತರಾಗಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿ ಟಿವಿ ಸೌಲಭ್ಯ ಇಲ್ಲದಿರುವ ಕಾರಣ ದರ್ಶನ್, ಪತ್ರಕರ್ತ ರವಿ ಬೆಳಗೆರೆ ಪುಸ್ತಕ ಓದುತ್ತಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಟ ದರ್ಶನ್, ಸಾಕಷ್ಟು ಪುಸ್ತಕಗಳನ್ನು ಓದಿಕೊಂಡು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಮೋಟಿವೇಟಿವ್ ಆಗುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : GBA ಎಫೆಕ್ಟ್​ಗೆ BBMP ನೌಕರಶಾಹಿ ತತ್ತರ – ಆಡಳಿತ ವ್ಯವಸ್ಥೆಯಲ್ಲಿ ತೀವ್ರ ಅವ್ಯವಸ್ಥೆ.. ಸಂಬಳವಿಲ್ಲದೆ ಸಂಕಷ್ಟದಲ್ಲಿ ಸಿಬ್ಬಂದಿಗಳು!

Btv Kannada
Author: Btv Kannada

Read More