ಬೆಂಗಳೂರು : ದಶಕಗಳಿಂದ ಅಸ್ತಿತ್ವದಲ್ಲಿದ್ದ BBMP ನೇಪತ್ಯಕ್ಕೆ ಸರಿದು GBA ಅಸ್ತಿತ್ವಕ್ಕೆ ಬಂದರೂ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿಗೆ GBA ತತ್ತರಿಸಿ ಹೋಗಿದ್ದು, ನೌಕರರಿಗೆ ವೇತನ ಕೊಡಲು ಪರದಾಡುತ್ತಿದೆ.
GBA ಎಫೆಕ್ಟ್ಗೆ BBMP ನೌಕರಶಾಹಿ ತತ್ತರಿಸಿ ಹೋಗಿದ್ದು, ಎರಡು ತಿಂಗಳ ಸಂಬಳವಿಲ್ಲದೆ ಬಿಬಿಎಂಪಿ ನೌಕರರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿದ್ರೆ ಆಡಳಿತ ಮಂಡಳಿ ಸಕಾರಾತ್ಮಕ ಉತ್ತರ ನೀಡುತ್ತಿದೆ. ಇದೀಗ ಬಿಬಿಎಂಪಿ ಹೋಗಿ ಜಿಬಿಎ ಯಾಕಾದ್ರೂ ಬಂತು ಎಂದು ನೌಕರರು ಹಿಡಿಶಾಪ ಹಾಕುತ್ತಿದ್ದಾರೆ. GBA ಆಡಳಿತ ವ್ಯವಸ್ಥೆಯಲ್ಲಿ ತೀವ್ರ ಅವ್ಯವಸ್ಥೆ ಉಂಟಾಗಿದ್ದು, ಇಲಾಖೆಗಳ ನಿರ್ವಹಣೆ-ಹುದ್ದೆಗಳ ನಿಯೋಜನೆಯಲ್ಲಿ ಸಮಸ್ಯೆಗಳಾಗಿದೆ. GBA ಆಡಳಿತ ಹಳಿಗೆ ಬರದಿರುವುದೇ ಸಂಬಳ ತಡವಾಗಲು ಕಾರಣವಾಗಿದೆ.
2 ತಿಂಗಳು ಸಂಬಳವಿಲ್ಲದೆ ನೌಕರರಿಗೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ವಾಹನಗಳಿಗೆ ಇಂಧನ ಪೂರೈಕೆಯೂ ಆಗುತ್ತಿಲ್ಲ. ಪೆಟ್ರೋಲ್ ಡಿಸೇಲ್ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡಿ, ಸಂಬಳ ಬಂದ್ಮೇಲೆ ಕೊಡ್ತೇವೆ ಎಂದು ಆಡಳಿತ ಹೇಳಿದೆ. ಈ ಬಗ್ಗೆ ನೌಕರರು, ಚಾಲಕ ಸಿಬ್ಬಂದಿಗಳು ಬಿಟಿವಿ ಜೊತೆ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಪುನೀತ್ ನಿರ್ದೇಶನದ 2ನೇ ಚಿತ್ರ “ಜಾನ್” ಶೂಟಿಂಗ್ ಶುರು – ಚಿತ್ರದ ಟೀಸರ್ ಔಟ್!







