ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟನ ವಿರುದ್ಧ FIR ದಾಖಲಿಸುವಂತೆ ಮನೋಜ್ ಎಂಬವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ನಟ ಧ್ರುವ ಸರ್ಜಾ ಅವರ ಫ್ಯಾನ್ಸ್ಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ. ಈ ಸಂಬಂಧ ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್, ಫ್ಯಾನ್ಸ್ ವಿರುದ್ಧ ದೂರು ದಾಖಲಿಸಲಾಗಿದೆ.

ನಟನ ಅಭಿಮಾನಿಗಳು ಪ್ರತಿನಿತ್ಯ ಬೈಕ್ಗಳನ್ನ ಅಡ್ಡಲಾಗಿ ಪಾರ್ಕ್ ಮಾಡುತ್ತಾರೆ. ಪ್ರತಿನಿತ್ಯ ಮನೆಯ ಮುಂದೆ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಗಳ ಮೇಲೆಯೇ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ನಟನ ವಿರುದ್ದ FIR ದಾಖಲಿಸುವಂತೆ ದೂರು ನೀಡಿದ್ದಾರೆ. ಆದ್ರೆ ಬನಶಂಕರಿ ಪೊಲೀಸರು ಕೇವಲ NCR ದಾಖಲು ಮಾಡಿದ್ದಾರೆ.
ಇದನ್ನೂ ಓದಿ : BTV ಬಿಗ್ ಇಂಪ್ಯಾಕ್ಟ್ – ನೆಲಮಂಗಲ ಲೈಬ್ರೆರಿಯನ್ ಆತ್ಮಹತ್ಯೆಗೆ ಕಾರಣವಾಗಿದ್ದ PDO ಗೀತಾಮಣಿ ಸಸ್ಪೆಂಡ್!
Author: Btv Kannada
Post Views: 337







