DDLR ಕಚೇರಿಯ LIVE ಲಂಚದ ಹಸಿ ಹಸಿ ಸ್ಟೋರಿ – ಬಡ ರೈತರಿಂದ ಲಕ್ಷಾಂತರ ಸುಲಿಗೆ.. ಬೆಂಗಳೂರು ಗ್ರಾ. DDLR ಕುಸುಮಲತಾ ಸಸ್ಪೆಂಡ್​ಗೆ ಆಗ್ರಹ!

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಲೇ ಇದ್ದು, ಹಲವು ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ DDLR ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಲಂಚಕ್ಕಾಗಿ DDLR ಕಚೇರಿಯಲ್ಲಿ ಬಡ ರೈತರನ್ನು ಸುಲಿಗೆ ಮಾಡ್ತಿದ್ದಾರೆ. ಭೂ ದಾಖಲೆಗಳ ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ.

ಇದು DDLR ಕಚೇರಿಯ LIVE ಲಂಚದ ಹಸಿ ಹಸಿ ಸ್ಟೋರಿ. ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯಲ್ಲಿ ಲಂಚ ಇಲ್ದೇ ಏನೂ ನಡೆಯಲ್ಲ. ಆರ್ಡರ್​ ಕಾಪಿ ಕೊಡಲು 50 ಸಾವಿರದಿಂದ 1 ಲಕ್ಷವರೆಗೂ ಲಂಚ ಕೊಡ್ಬೇಕು. ಭೂ ದಾಖಲೆಗಳ ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಲಂಚದ ಆರೋಪ ಕೇಳಿಬಂದಿದ್ದು, ಲಂಚ ಇಲ್ಲದೇ DDLR ಉಪ ನಿರ್ದೇಶಕಿ ಕುಸುಮಲತಾ ಏನೂ ಮಾಡಲ್ಲ. DDLR ಅಂತಿಮ ಆದೇಶ ಪಡೆಯಲು ಕುಸುಮಲತಾ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವಿದೆ.

ಕುಸುಮಲತಾ ಡೆಪ್ಯೂಟಿ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್ ಅಧಿಕಾರಿ ಆಗಿದ್ದು, ಈಕೆ ರೈತನಿಂದ ಲಂಚವನ್ನು ಫೋನ್ ಪೇ ಮೂಲಕ ಹಣ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. DDLR ಕಚೇರಿಯನ್ನು ಕುಸುಮಲತಾ ಲಂಚದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದು, ಬಡವರು, ರೈತರಿಂದ ಕುಸುಮಲತಾ ಹಗಲು ದರೋಡೆ ಮಾಡ್ತಿದ್ದಾರೆ. ಇದೀಗ ರೈತರ ಪರವಾಗಿ ವಕೀಲ ನಿಖಿಲ್ ಎಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಲಂಚಕ್ಕೆ ಡಿಮ್ಯಾಂಡ್ – ಪಬ್ಲಿಕ್ ಪ್ರಾಸಿಕ್ಯೂಟರ್ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ!

Btv Kannada
Author: Btv Kannada

Read More