‘ಗತವೈಭವ’ಕ್ಕೆ ರೆಡಿಯಾದ ಸಿಂಪಲ್ ಸುನಿ – ನ.14ಕ್ಕೆ ಸಿನಿಮಾ ಗ್ಯ್ರಾಂಡ್ ರಿಲೀಸ್!

ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಗತವೈಭವ’ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಯುವ ನಟ ದುಶ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸಿಂಪಲ್ ಸುನಿ ಸಾಮಾನ್ಯವಾಗಿ ಜನರಿಗೆ ಬೇಗ ಮುಟ್ಟುವಂತೆ ಸಿಂಪಲ್ ಆಗಿ ಕಥೆ ಹೇಳುತ್ತಾರೆ. ಇದುವರೆಗೂ ಸಿಂಪಲ್ ಸುನಿ ನಿರ್ದೇಶಿಸಿರುವ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾಗಿ ಮೂಡಿಬಂದಿದೆ. ಹಾಗೆಯೇ ಈ ಚಿತ್ರವನ್ನು ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಬ್ಲೆಂಡ್ ಮಾಡಿ ಸುನಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸುಮಾರು ನಾಲ್ಕು ಜನ್ಮಗಳ ಕಥಾನಕ ಹೊಂದಿರೋ ಗತವೈಭವ, ವೆರೈಟಿ ಆಫ್ ಶೇಡ್ಸ್‌‌ನಲ್ಲಿ ನಾಯಕ, ನಾಯಕಿಯನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ.

ಸಿಂಪಲ್ ಸುನಿ ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಹೀರೋವನ್ನು ವಿಶಿಷ್ಠವಾಗಿ ಇಂಟ್ರುಡ್ಯೂಸ್ ಮಾಡುವ ಮೂಲಕ ಸಿಂಪಲ್ ಸುನಿ ಸಿನಿಪ್ರಿಯರನ್ನು ಸೆಳೆದಿದ್ದರು. ಹೀರೋ ಗೆಟಪ್, ಮ್ಯಾನರಿಸಂ, ಕಾಮಿಡಿ ಇಷ್ಟ ಆಗಿತ್ತು.

ಇನ್ನು ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್, ಎಮೋಷನ್ ಎಲ್ಲವೂ ಇದೆ. ಒಟ್ಟಿನಲ್ಲಿ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ : ಕೈ ಕೊಟ್ಟ ಬೆಳೆ, ಸಾಲಬಾಧೆಯಿಂದ ಯುವ ರೈತ ಆತ್ಮಹತ್ಯೆ!

Btv Kannada
Author: Btv Kannada

Read More