ಬೆಂಗಳೂರು : PDO ಕಿರುಕುಳಕ್ಕೆ ಬೇಸತ್ತು ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಕಳಲುಘಟ್ಟ ಪಂಚಾಯತ್ ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕಳೆದ 25 ವರ್ಷಗಳಿಂದ ರಾಮಚಂದ್ರಯ್ಯ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಕೆಲಸ ಮಾಡ್ತಿದ್ದರು. ಕಳೆದ 3 ತಿಂಗಳಿಂದ ಸಂಬಳ ನೀಡದೇ PDO ಗೀತಾಮಣಿ ಕಿರುಕುಳ ನೀಡುತ್ತಿದ್ದರು. ಕಳಲುಘಟ್ಟ ಗ್ರಾ.ಪಂಚಾಯತ್ PDO ಗೀತಾಮಣಿ ವಿರುದ್ದ ರಾಮಚಂದ್ರಯ್ಯಗೆ ಬಯೋಮೆಟ್ರಿಕ್ ಹಾಜರಾತಿ ಹಾಕದೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

PDO ಗೀತಾಮಣಿ ಸತತ ಕಿರುಕುಳಕ್ಕೆ ಮನನೊಂದು ರಾಮಚಂದ್ರಯ್ಯ ವಿಷ ಸೇವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತ ರಾಮಚಂದ್ರಯ್ಯನ ಅಣ್ಣನ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, PDO ಗೀತಾಮಣಿ ವಿರುದ್ದ ತ್ಯಾಮಗೊಂಡ್ಲು ಠಾಣೆ ಪೊಲೀಸರು FIR ದಾಖಲಿಸಿದ್ದಾರೆ. ಇದೀಗ ಕಳಲುಘಟ್ಟ ಗ್ರಾಮ ಪಂಚಾಯತ್ PDO ಗೀತಾಮಣಿಗೆ ಬಂಧನ ಭೀತಿ ಶುರುವಾಗಿದೆ.

ಇದನ್ನೂ ಓದಿ : ಯು.ಟಿ ಖಾದರ್ ಅಲ್ಲ, ಲೂಟಿ ಖಾದರ್ – ಸ್ಪೀಕರ್ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿ!







