ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಕಂಗೆಟ್ಟ ಜನಕ್ಕೆ ಕೇಂದ್ರದ ಬರೆ – LPG ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ!

ಬೆಂಗಳೂರು : ಕೇಂದ್ರ ಸರ್ಕಾರ LPG ಸಿಲಿಂಡರ್‌ಗಳ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಿದೆ. ಈ ಬಾರಿ ಗೃಹಬಳಕೆಯ ಅನಿಲ ಸಿಲಿಂಡರ್ ಮತ್ತು ಉಜ್ವಲ ಯೋಜನೆಯ ಬೆಲೆಗಳನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಹೊಸ ದರಗಳು ಇಂದು ರಾತ್ರಿಯಿಂದ ಜಾರಿಗೆ ಬರಲಿವೆ.

ಉಜ್ವಲ ಯೋಜನೆಯಡಿಯಲ್ಲಿ 500 ರೂ.ಗೆ ಲಭ್ಯವಿರುವ ಸಿಲಿಂಡರ್‌ಗಳು ಇಂದು ಮಧ್ಯರಾತ್ರಿಯಿಂದ 550 ರೂ.ಗೆ ಲಭ್ಯವಿರುತ್ತವೆ. ಸಾಮಾನ್ಯ ಸಿಲಿಂಡರ್ ಬೆಲೆ 803 ರೂ.ಗಳಿಂದ 853 ರೂ.ಗಳಿಗೆ ಏರಿಕೆಯಾಗಲಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಜೊತೆಗೆ ಮುಂದಿನ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳ ಆಗಲಿದೆ ಎನ್ನಲಾಗುತ್ತಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ ಹೆಚ್ಚಳ ಆಗುವ ಸಾಧ್ಯತೆ ಇದ್ದು, ವಾಹನ ಸವಾರರಿಗೆ ದರ ಏರಿಕೆ ಬಿಸಿ ತಟ್ಟಲಿದೆ.

ದೆಹಲಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳು  

  • ರಾಜಧಾನಿ ದೆಹಲಿಯಲ್ಲಿ 803 ರೂ.ಗೆ ಲಭ್ಯವಿದ್ದ ಗ್ಯಾಸ್ ಸಿಲಿಂಡರ್ ಈಗ 853 ರೂ.ಗೆ ಏರಿಕೆಯಾಗಲಿದೆ.
  • ಮುಂಬೈನಲ್ಲಿ 82.50 ರೂ. ಇದ್ದ 14.2 ಕೆಜಿ ಸಿಲಿಂಡರ್ ಬೆಲೆ 852.50 ರೂ.ಗೆ ಏರಿಕೆಯಾಗಲಿದೆ.
  • ಕೋಲ್ಕತ್ತಾದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 829 ರೂ.ಗಳಿಂದ 879 ರೂ.ಗಳಿಗೆ ಏರಿಕೆಯಾಗಲಿದೆ.
  • ಚೆನ್ನೈನಲ್ಲಿ 818.50 ರೂ.ಗಳಿದ್ದ ಸಿಲಿಂಡರ್ ಇಂದು ಮಧ್ಯರಾತ್ರಿಯಿಂದ 868.50 ರೂ.ಗಳಿಗೆ ಏರಿಕೆಯಾಗಲಿದೆ.
  • ಪಾಟ್ನಾದಲ್ಲಿ ಗೃಹಬಳಕೆಯ ಅನಿಲ ಸಿಲಿಂಡರ್ ಬೆಲೆ ಈಗ 901 ರೂ.ಗಳಿಂದ 951 ರೂ.ಗಳಿಗೆ ಏರಿಕೆಯಾಗಲಿದೆ.
  • ಲಕ್ನೋದಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 855.20 ರೂ.ಗಳಿಂದ 905.55 ರೂ.ಗಳಿಗೆ ಏರಿಕೆಯಾಗಲಿದೆ.

ಇದನ್ನೂ ಓದಿ : ಕರ್ನಾಟಕ ಬಿಜೆಪಿಗೆ ಬೊಮ್ಮಾಯಿಯೇ ಮುಂದಿನ ಅಧ್ಯಕ್ಷ? – ಏ.18ಕ್ಕೆ ಹೈಕಮಾಂಡ್ ಅಧಿಕೃತ ಘೋಷಣೆ!

Btv Kannada
Author: Btv Kannada

Read More