DJ ಹಳ್ಳಿ ಇನ್ಸ್​​ಪೆಕ್ಟರ್ ಖೆಡ್ಡಾಗೆ ಕೆಡವಿದ್ದ ‘ಹನಿ’ರಾಣಿಗೆ ಸಂಕಷ್ಟ – ಐನಾತಿ ಆಯೇಷಾ ವಿರುದ್ಧ FIR ದಾಖಲು!

ಬೆಂಗಳೂರು : DJ ಹಳ್ಳಿ ಇನ್ಸ್​​ಪೆಕ್ಟರ್ ಖೆಡ್ಡಾಗೆ ಕೆಡವಿದ್ದ ‘ಹನಿ’ರಾಣಿಗೆ ಇದೀಗ ಸಂಕಷ್ಟ ಎದುರಾಗಿದೆ. ಮೂಡಿಗೆರೆಯ ಮಹಿಳೆಯೊಬ್ಬಳು DJ ಹಳ್ಳಿ ಇನ್ಸ್​ಪೆಕ್ಟರ್ ಸುನೀಲ್​​ಗೆ ಹನಿಟ್ರ್ಯಾಪ್​ ಮಾಡಿದ್ದು, ಪೊಲೀಸರನ್ನೇ ಹನಿಟ್ರ್ಯಾಪ್​​ ಬಲೆಗೆ ಬೀಳಿಸುತ್ತಿದ್ದ ಐನಾತಿ ಆಯೇಷಾ ವಿರುದ್ಧ ಈಗ FIR ದಾಖಲಾಗಿದೆ.

ಹಣಕ್ಕಾಗಿ ಆಯೇಷಾ, ಇನ್ಸ್​ಪೆಕ್ಟರ್ ಸುನೀಲ್​ಗೆ ಹನಿಟ್ರ್ಯಾಪ್ ಮಾಡಿದ್ದು, ಹನಿಟ್ರ್ಯಾಪ್ ಸುಂದರಿ ಆಯೇಷಾ ವಿರುದ್ಧ ಹಳೇ ಸ್ನೇಹಿತೆ ಅನಿತಾ ರವಿ ಎಂಬುವವರು ದೂರು ನೀಡಿದ್ದರು. ದೂರಿನನ್ವಯ ಬೆಂಗಳೂರಿನ DJ ಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯೇಷಾ ವಿರುದ್ಧ FIR ದಾಖಲಾಗಿದೆ. ‘ಹನಿ’ರಾಣಿ ಆಯೇಷಾ ವಿರುದ್ಧ BNS 351,352 ಅಡಿ ಪ್ರಕರಣ ದಾಖಲಾಗಿದೆ. ಹನಿಟ್ರ್ಯಾಪ್​ ಲೇಡಿ ಆಯೇಷಾ ತನ್ನ ಬಗ್ಗೆ ಎಲ್ಲಾದ್ರೂ ಬಾಯ್ಬಿಟ್ರೆ ಹುಷಾರ್ ಅಂತ ಸ್ನೇಹಿತೆ ಅನಿತಾ ರವಿಗೆ ಅವಾಜ್ ಹಾಕಿದ್ಲಂತೆ. ಮಾಧ್ಯಮದ ಮುಂದೆ ಹೋಗಿ ತನ್ನ ಹಿಸ್ಟರಿ ಹೇಳ್ತೀಯಾ ಅಂತ ಬೆದರಿಕೆ ಹಾಕಿದ್ದು, FIR ಜೊತೆಗೆ ಮುದುಕಪ್ಪನಿಗೆ ಟ್ರ್ಯಾಪ್ ಮಾಡಿದ್ದ ಡೀಲಿಂಗ್ ಸ್ಟೋರಿ ಕೂಡ ರಿವೀಲ್ ಆಗಿದೆ.

ಕಾವಲ್ ಭೈರಸಂದ್ರದ ಸುಬ್ರಮಣ್ಯಂ ಎಂಬುವವರಿಗೆ ಆಯೇಷಾ ಹನಿಟ್ರ್ಯಾಪ್ ಮಾಡಿದ್ದಳು. ಸುಬ್ರಮಣ್ಯಂಗೆ ಖೆಡ್ಡಾಗೆ ಕೆಡವಿದ್ದ ದಿನಾಂಕ, ದಾಖಲೆ ಸಮೇತ ಅನಿತಾ ರವಿ ದೂರು ನೀಡಿದ್ದು, ಜುಲೈ 22, 2022ರಂದು ಲಕ್ಷ ಲಕ್ಷ ಹಣಕ್ಕಾಗಿ ಸುಬ್ರಮಣ್ಯಂಗೆ ಆಯೇಷಾ ಹನಿಟ್ರ್ಯಾಪ್ ಮಾಡಿದ್ದಳು. DJ ಹಳ್ಳಿ ಇನ್ಸ್​ಪೆಕ್ಟರ್ ಕೇಸ್ ಇದೀಗ ಆಯೆಷಾ ವಿರುದ್ಧದ ಎಫ್​ಐಆರ್ ಬಯಲು ಮಾಡ್ತಿದೆ. DJ ಹಳ್ಳಿ ಇನ್ಸ್​ಪೆಕ್ಟರ್ ಸುನೀಲ್ ಆಯೆಷಾ ಕುತಂತ್ರಕ್ಕೆ ಅನ್ಯಾಯವಾಗಿ ಬಲಿಯಾಗಿದ್ದರು.

ಇದನ್ನೂ ಓದಿ : “ಲವ್ ಯು ಮುದ್ದು” ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ – ನ.7ಕ್ಕೆ “ಕೆಮಿಸ್ಟ್ರಿ ಆಫ್ ಕರಿಯಪ್ಪ” ನಿರ್ದೇಶಕರ ಸಿನಿಮಾ ತೆರೆಗೆ!

Btv Kannada
Author: Btv Kannada

Read More