ಹೈದರಾಬಾದ್ : ತೆಲಂಗಾಣದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಅವರು ಇಂದು ಹೈದರಾಬಾದ್ನ ನಲ್ಲಕುಂಟಾದಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠಕ್ಕೆ ಭೇಟಿ ನೀಡಿ, ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಜಿಗಳ ದರ್ಶನ ಪಡೆದರು.

ಮುಖ್ಯಮಂತ್ರಿಗಳು ಪರಮಪೂಜ್ಯ ಶ್ರೀಗಳವರಿಗೆ ಗೌರವಪೂರ್ವಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ, ಅವರು ರಾಜ್ಯದ ಶಾಂತಿ, ಸಮೃದ್ಧಿ ಮತ್ತು ಒಟ್ಟಾರೆ ಕ್ಷೇಮಕ್ಕಾಗಿ ಪರಮಪೂಜ್ಯರ ದಿವ್ಯ ಆಶೀರ್ವಾದವನ್ನು ಕೋರಿದರು. ಜಗದ್ಗುರುಗಳು ಅವರಿಗೆ ಹಾರೈಸಿದರು.

ಇದನ್ನೂ ಓದಿ : ನವೆಂಬರ್ 14 ರಂದು ತೆರೆಗೆ ಅಪ್ಪಳಿಸಲಿರುವ ‘Kite ಬ್ರದರ್ಸ್’ – ಗುಜರಾತ್ನ ‘ಗಾಳಿಪಟ’ ಸ್ಪರ್ಧೆ ಗೆಲುವಿನ ಸಾಮಾಜಿಕ ಸಂದೇಶದ ಸಿನಿಮಾ!
Author: Btv Kannada
Post Views: 257







