ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆಯದೇ ಪ್ರತಿಭಟನೆ – ಪೊಲೀಸರಿಗೆ ಧಮ್ಕಿ ಹಾಕಿದ CPI (M) ಕಾರ್ಯಕರ್ತರ ಮೇಲೆ FIR!

ಬೆಂಗಳೂರು : ಪ್ರತಿಭಟನೆಗೆ ಅನುಮತಿ ಪಡೆಯದೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ CPI(M) ಪಕ್ಷದ ಕಾರ್ಯಕರ್ತರು ಸೇರಿದಂತೆ ಒಟ್ಟು ಐದು ಮಂದಿ ಆರೋಪಿಗಳ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದೆ. ಮಡಿವಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಅರುಣ್ ಕುಮಾರ್ ರಿಂದ ದೂರು. CPI(M) ಪಕ್ಷದ ಸುಹಾಸ್, ಚಿತ್ರಭಾನು, ಶಮ್ಮಿ, ಹಾಗೂ ಸ್ಥಳೀಯರಾದ ಅರುಣ್ ಮತ್ತು ಆನಂದ್ ಮಡಿವಾಳ ಠಾಣೆಯಲ್ಲಿ FIR ದಾಖಲಾಗಿದೆ.

CPI(M) ಕಾರ್ಯಕರ್ತರು ವೇತನದ ವಿಚಾರವಾಗಿ ಕೆಂಪು ಬಾವುಟ ಮತ್ತು ಪ್ಲೇ ಕಾರ್ಡ್‌ಗಳನ್ನು ಹಿಡಿದು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಸ್ಥಳೀಯರಾದ ಅರುಣ್ ಮತ್ತು ಆನಂದ್ ಅವರೊಂದಿಗೆ ಗಲಾಟೆ ನಡೆದಿದೆ.

ಗಲಾಟೆಯನ್ನು ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ PSI ಅರುಣ್ ಕುಮಾರ್ ಅವರೊಂದಿಗೆ CPI(M) ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದಾರೆ. ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ತೊಂದರೆ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

PSI ಅರುಣ್ ಕುಮಾರ್ ಅವರು ನೀಡಿದ ದೂರಿನನ್ವಯ, ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ FIR ದಾಖಲಾಗಿದೆ.

ಇದನ್ನೂ ಓದಿ : ‘ತ್ರಿಬಲ್’ ರೈಡಿಂಗ್​ ಹೊರಟ ಸುಂದರಿಗೆ ‘ಮೂವರು’ ಗಂಡಂದಿರು – ಹೆಂಡ್ತಿ ಮಿಸ್ಸಿಂಗ್ ಅಂತಾ ದೂರು ಕೊಟ್ಟಾಗ ಮದುವೆ ಪುರಾಣ ರಿವೀಲ್!

Btv Kannada
Author: Btv Kannada

Read More