ಬಿಹಾರ ಎಲೆಕ್ಷನ್​ ಬಳಿಕ ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಚರ್ಚೆ – ಹೈಕಮಾಂಡ್ ತೀರ್ಮಾನವೇ ಅಂತಿಮ.. ಗೃಹ ಸಚಿವ ಪರಂ!

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಮತ್ತು ನಾಯಕತ್ವದ ಕುರಿತಾದ ಎಲ್ಲಾ ನಿರ್ಧಾರಗಳನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಗೃಹ                 ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. “ನಾವು ಇಲ್ಲಿ ಕೂತು ತೀರ್ಮಾನ ಮಾಡೋದಲ್ಲ. ಅವಶ್ಯಕತೆ ಇದ್ದರೆ, ಬಿಹಾರ ಚುನಾವಣೆ ನಂತರ ಹೈಕಮಾಂಡ್‌ನವರೇ ಆ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ಪರಮೇಶ್ವರ್ ಹೇಳಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಡಿಕೆಶಿ ಅವರ ಬಗ್ಗೆ ಹೇಳೋದಿಕ್ಕೆ ನಮಗೆ ಸಾಮರ್ಥ್ಯ ಇಲ್ಲ. ಅವರು ನಮ್ಮ ನಾಯಕರು, ನಮ್ಮ ಅಧ್ಯಕ್ಷರು ಮತ್ತು ಸಮರ್ಥರು ಇದ್ದಾರೆ” ಎಂದಿದ್ದಾರೆ. “ಶಿವಕುಮಾರ್ ಅವರನ್ನು ಹೋಲಿಕೆ ಮಾಡೋ ನಾಯಕರು ಈಗ ಯಾರಿದ್ದಾರೆ? ಅವರಿಗೆ ಅಷ್ಟೊಂದು ಸಾಮರ್ಥ್ಯ ಇದೆ. ಅವರು ಸಿಎಂ ಆಗೋ ಬಗ್ಗೆ ನಾವು ಹೇಳೋದಿಕ್ಕಾಗಲ್ಲ” ಎಂದು ಡಿಕೆ ಶಿವಕುಮಾರ್ ಅವರ ಸಾಮರ್ಥ್ಯವನ್ನು ಪರಮೇಶ್ವರ್ ಶ್ಲಾಘಿಸಿದ್ದಾರೆ.

ಅಂತಿಮವಾಗಿ “ಹೈಕಮಾಂಡ್‌ನವರ ತೀರ್ಮಾನ ಅಂತಿಮ ಆದಾಗ ನಾವು ಅದಕ್ಕೆ ಬದ್ಧರಾಗಿರ್ತೇವೆ” ಎಂದು ಗೃಹ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಆಗಾಗ ಕೇಳಿಬರುತ್ತಿರುವ ಸಿಎಂ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತ ಗೊಂದಲಗಳ ನಡುವೆ, ಎಲ್ಲಾ ನಿರ್ಣಾಯಕ ನಿರ್ಧಾರಗಳು ಪಕ್ಷದ ಕೇಂದ್ರ ನಾಯಕತ್ವದ ಕೈಯಲ್ಲಿವೆ ಎಂದು ಡಾ. ಜಿ. ಪರಮೇಶ್ವರ್ ಅವರು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ : ‘ತ್ರಿಬಲ್’ ರೈಡಿಂಗ್​ ಹೊರಟ ಸುಂದರಿಗೆ ‘ಮೂವರು’ ಗಂಡಂದಿರು – ಹೆಂಡ್ತಿ ಮಿಸ್ಸಿಂಗ್ ಅಂತಾ ದೂರು ಕೊಟ್ಟಾಗ ಮದುವೆ ಪುರಾಣ ರಿವೀಲ್!

Btv Kannada
Author: Btv Kannada

Read More