ಧರ್ಮಸ್ಥಳ ಪ್ರಕರಣದಲ್ಲಿ SIT ಕ್ಲೀನ್ ಚಿಟ್ ?.. ಚಿನ್ನಯ್ಯ & ಬುರುಡೆ ಟೀಂ ವಿರುದ್ಧ ತನಿಖೆ – ಅ.31ರೊಳಗೆ ವರದಿ ಸರ್ಕಾರಕ್ಕೆ ಸಲ್ಲಿಕೆ!

ಬೆಂಗಳೂರು : ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡಿದ್ದ ಧರ್ಮಸ್ಥಳ ಗ್ರಾಮದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವ ಸಾಧ್ಯತೆಯಿದೆ. ತನಿಖೆ ಪೂರ್ಣಗೊಳಿಸಿದ ಬಳಿಕ SIT ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ, ಬಹು ನಿರೀಕ್ಷಿತ SIT ವರದಿಯಲ್ಲಿ ಪ್ರಕರಣಕ್ಕೆ ‘ಕ್ಲೀನ್‌ ಚಿಟ್‌’ ನೀಡಲಾಗುತ್ತಾ ಎಂಬ ಬಲವಾದ ಸುಳಿವುಗಳು ಕೇಳಿಬರುತ್ತಿವೆ.

ಈ ಕುರಿತು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇತ್ತೀಚೆಗೆ ಸುಳಿವು ನೀಡಿರುವುದು ಈ ಸಾಧ್ಯತೆಯನ್ನು ಹೆಚ್ಚಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಮಾಡಿದ್ದ ಗಂಭೀರ ಆರೋಪಗಳ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದಕ್ಷ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ SIT ರಚಿಸಿತ್ತು.

SIT ತನಿಖೆ ನಡೆಸಿ ಸಾಲು ಸಾಲು ಆರೋಪಗಳನ್ನು ಮಾಡಿದ ಮಾಸ್ಕ್​ ಮ್ಯಾನ್ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್ ಸೇರಿ ಇತರ ‘ಬುರುಡೆ ಟೀಂ’ ವಿರುದ್ಧ ತನಿಖೆ ನಡೆಸಿದೆ. ಚಿನ್ನಯ್ಯ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಅ.31ರೊಳಗೆ ತನಿಖೆ ಪೂರ್ಣಗೊಳಿಸಿ ಚಿನ್ನಯ್ಯ ಮತ್ತು ತಂಡದ ವಿರುದ್ಧವೇ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.

SIT ವರದಿಯಲ್ಲಿ ಕ್ಲೀನ್‌ ಚಿಟ್‌ ದೊರೆತರೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲಿನ ಎಲ್ಲಾ ಸಾಲು ಸಾಲು ಆರೋಪಗಳಿಂದ ಮುಕ್ತಿ ದೊರೆತಂತಾಗಿ, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಮೇಲಿನ ಕಳಂಕವೂ ತೊಳೆದಿಟ್ಟಂತಾಗಲಿದೆ. SIT ವರದಿ ಯಾವ ಸ್ವರೂಪದಲ್ಲಿ ಇರಲಿದೆ? ಈ ಪ್ರಕರಣಕ್ಕೆ ಸುಖಾಂತ್ಯ ದೊರೆಯಲಿದೆಯೇ? ಎಂಬ ಪ್ರಶ್ನೆಗಳಿಗೆ ಅಕ್ಟೋಬರ್ 31ರೊಳಗೆ ಉತ್ತರ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ : RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಪೊಲೀಸರ ಬುಲಾವ್ – ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

Btv Kannada
Author: Btv Kannada

Read More