ಕೆ.ಆರ್.ಪೇಟೆ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಕಾರ್ಯಕರ್ತರು ಇಂದು ಸಂಜೆ 5 ಗಂಟೆಗೆ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 300ಕ್ಕೂ ಹೆಚ್ಚು ಆರ್.ಎಸ್.ಎಸ್. ಕಾರ್ಯಕರ್ತರು ಈ ಪಥಸಂಚಲನದಲ್ಲಿ ಭಾಗಿ.

ಪಥಸಂಚಲನಕ್ಕೆ ಮುನ್ನಾ ದಿನ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಆರ್.ಎಸ್.ಎಸ್. ಕಚೇರಿ ಬಳಿ ಕಾರ್ಯಕರ್ತರ ಪೂರ್ವ ತಾಲೀಮು ನಡೆಯಿತು. ಅನಿರೀಕ್ಷಿತವಾಗಿ ಸುರಿದ ಮಳೆಯ ಮಧ್ಯೆಯೂ ಕಾರ್ಯಕರ್ತರು ಉತ್ಸಾಹದಿಂದ ತಾಲೀಮನ್ನು ಮುಂದುವರಿಸಿದರು. ಮಳೆಯ ಅಡ್ಡಿಯ ಆತಂಕದ ನಡುವೆಯೂ, ಕಾರ್ಯಕರ್ತರ ಶಿಸ್ತು ಮತ್ತು ಬದ್ಧತೆ ಗಮನ ಸೆಳೆಯಿತು.

ಮಾಜಿ ಸಚಿವ ನಾರಾಯಣಗೌಡ ಅವರು ಗಣವೇಷಧಾರಿಯಾಗಿ ಈ ಪೂರ್ವ ತಾಲೀಮಿನಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಹುರುಪು ತುಂಬಿದರು. ಇದರ ಜೊತೆಗೆ, ಸ್ಥಳೀಯ ಶಾಸಕ ಮಂಜು ಅವರು ಕೂಡ ತಾಲೀಮು ವೀಕ್ಷಿಸಲು ಆಗಮಿಸಿ, ಆರ್.ಎಸ್.ಎಸ್. ಕಾರ್ಯಕರ್ತರ ಪಥಸಂಚಲನಕ್ಕೆ ಶುಭ ಕೋರಿದರು.

ತಾಲೀಮು ನಂತರ ಸಂಜೆ 5 ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ಇಡೀ ಪಥಸಂಚಲನ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಪಟ್ಟಣದ ಸಾರ್ವಜನಿಕರು ಕೂಡ ಈ ಶಿಸ್ತಿನ ಪಥಸಂಚಲನವನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದಾರೆ.
ಸಂಜೆ 5 ಗಂಟೆಗೆ ಪಥಸಂಚಲನ ಆರಂಭವಾಗಲಿದೆ.
ಇದನ್ನೂ ಓದಿ : ‘ಗುರು’ ಸಿದ್ದರಾಮಯ್ಯ ಹೇಳಿಕೆಗೆ ‘ಸಾಹುಕಾರ್’ ಸಾಥ್ – ಸಿದ್ದು ಬಳಿಕ ಅಹಿಂದ ನಾಯಕತ್ವಕ್ಕೆ ‘ಜೈ’ ಎಂದ ಜಾರಕಿಹೊಳಿ!







