‘ಗುರು’ ಸಿದ್ದರಾಮಯ್ಯ ಹೇಳಿಕೆಗೆ ‘ಸಾಹುಕಾರ್’ ಸಾಥ್ – ಸಿದ್ದು ಬಳಿಕ ಅಹಿಂದ ನಾಯಕತ್ವಕ್ಕೆ ‘ಜೈ’ ಎಂದ ಜಾರಕಿಹೊಳಿ!

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅಹಿಂದ ನಾಯಕತ್ವ’ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ನನ್ನ ನಂತರ ಅಹಿಂದ ನಾಯಕತ್ವವನ್ನು ಸಚಿವ ಸತೀಶ್ ಜಾರಕಿಹೊಳಿ ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಯತೀಂದ್ರ ಅವರ ಹೇಳಿಕೆ ಅಹಿಂದ ನಾಯಕತ್ವದ ಬಗ್ಗೆಯೇ ಹೊರತು ಸಿಎಂ, ಡಿಸಿಎಂ ಅಥವಾ ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಅಲ್ಲ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೂ ಮತ್ತು ಅಹಿಂದ ನಾಯಕತ್ವಕ್ಕೂ ಸಂಬಂಧವಿಲ್ಲ. ಸಿಎಂ ಸ್ಥಾನ ಬೇರೆ, ಅಹಿಂದ ನಾಯಕತ್ವ ಬೇರೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಡಿಕೆಶಿ ಭೇಟಿ ಬಳಿಕ ಉದ್ಯಮಿ ಮೋಹನ್‌ದಾಸ್ ಪೈ ಉಲ್ಟಾ- ಬೆಂಗಳೂರಿನ ಡಿಸಿಎಂ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಮೆಚ್ಚುಗೆ!

Btv Kannada
Author: Btv Kannada

Read More