ಬೆಂಗಳೂರು : ಕರ್ನಾಟಕದ ರೈತರಿಗೆ ತೆಲಂಗಾಣದ ವ್ಯಾಪಾರಿಗಳಿಂದ ಭಾರೀ ವಂಚನೆಯಾಗಿದೆ. ತೆಲಂಗಾಣದವರು 2 ಕೋಟಿಗೂ ಹೆಚ್ಚು ಮೌಲ್ಯದ ಜೋಳ ಖರೀದಿಸಿ ರೈತರಿಗೆ ವಂಚನೆ ಮಾಡಿದ್ದಾರೆ. ಆದರೆ ರಾಜ್ಯದ ರೈತರ ಪರ ನಿಲ್ಲಬೇಕಾದ ಸಚಿವ ಜಮೀರ್ ಅಹಮದ್ ತೆಲಂಗಾಣ ವ್ಯಾಪಾರಿಗಳ ಪರ ನಿಂತಿದ್ದಾರೆ.

ಚಿಕ್ಕಬಳ್ಳಾಪುರದ ರೈತರಿಂದ ತೆಲಂಗಾಣದ ವ್ಯಾಪಾರಿಗಳಿಗೆ ಜೋಳ ಮಾರಾಟ ಮಾಡಲಾಗಿತ್ತು. ಪೆರೆಸಂದ್ರ ರೈತರು ಫೆಬ್ರವರಿಯಿಂದ ಜುಲೈವರೆಗೆ ಮೆಕ್ಕೆಜೋಳ ಮಾರಿದ್ದರು. ಖರೀದಿ ನಂತರ ಹೈದರಾಬಾದ್ ವ್ಯಾಪಾರಿಗಳು ಹಣ ನೀಡದೇ ಸತಾಯಿಸಿದ್ದರು. ಈ ಸಂಬಂಧ BNS 318 ವಂಚನೆ ಆರೋಪದಡಿ ಅಬ್ದುಲ್ ರಜಾಕ್, ಅಕ್ಬರ್ ಪಾಷಾ, ನಾಸೀರ್ ಅಹಮದ್ ವಿರುದ್ಧ FIR ದಾಖಲಾಗಿತ್ತು.
ಇದೀಗ ಕೇಸ್ ಸೆಟಲ್‌ಮೆಂಟ್ ಮಾಡಿ ಎಂದು ಸಚಿವ ಜಮೀರ್ ಅಹಮದ್ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಸಚಿವ ಜಮೀರ್ ಚಿಕ್ಕಬಳ್ಳಾಪುರದ ಪೆರೆಸಂದ್ರ PSI ಜಗದೀಶ್ ರೆಡ್ಡಿಗೆ ಕರೆ ಮಾಡಿದ್ದಾರೆ. ಈ ವೇಳೆ ನಮ್ಮ ಸಂಬಂಧಿಕರು, ಅವರಿಗೆ ಸಹಾಯ ಮಾಡಿ, ವಂಚಕರಿಗೆ ಸಹಾಯ ಮಾಡುವಂತೆ PSIಗೆ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಪೆರೆಸಂದ್ರ PSI ಜಗದೀಶ್ ರೆಡ್ಡಿ ಸೆಟಲ್ ಮಾಡಿಸಿಕೊಡ್ತೀನಿ ಸರ್ ಎಂದಿದ್ದು, ಸಚಿವ ಜಮೀರ್ ಕರೆ ಮಾಡಿದ ಕೂಡಲೇ PSI ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದಾರೆ.

ವಂಚನೆ ಕೇಸ್ನಲ್ಲಿ ಮಧ್ಯಪ್ರವೇಶಿಸಿದ್ಯಾಕೆ ಸಚಿವರು? ಕೇಸ್ ಸೆಟಲ್ಮೆಂಟ್ಗೆ ಪೊಲೀಸರ ಒತ್ತಡವೇರಿದ್ಯಾಕೆ? ಆರೋಪಿಗಳಿಗೂ ಆ ಪ್ರಭಾವಿ ಸಚಿವರಿಗೂ ಏನು ಸಂಬಂಧ? ಕರ್ನಾಟಕದ ರೈತರಿಗೆ ಆಗ್ತಿರೋ ಅನ್ಯಾಯ ಕಾಣಿಸುತ್ತಿಲ್ವಾ? ಎಂದು ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ಯುವತಿ ಸಾವು!







