ಹಾವೇರಿ : ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಸರಣಿ ಅತ್ಯಾಚಾರ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಗರ್ಭಾವತಿಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. A1 ಉದಯ ಮತ್ತು A2 ಕಿಶನ್ ಅತ್ಯಾಚಾರ ಎಸಗಿದ ಆರೋಪಿಗಳು. A3 ಆಕಾಶ್ ಮತ್ತು A4 ಚಂದ್ರು ಅತ್ಯಾಚಾರಕ್ಕೆ ಸಹಕರಿಸಿದ ಆರೋಪಿಗಳು.
ಮಾರ್ಚ್ 4ರಂದು ಉದಯ ಎಂಬಾತ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ A2 ಆರೋಪಿ ಕಿಶನ್ ಎಪ್ರಿಲ್ 4ರಂದು ಮಾವಿನ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಸರಣಿ ಅತ್ಯಾಚಾರದಿಂದಾಗಿ ಅಪ್ರಾಪ್ತ ಬಾಲಕಿ 8 ತಿಂಗಳ ಗರ್ಭಾವತಿಯಾಗಿದ್ದಾಳೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬ್ಯಾಂಕಾಕ್ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ – ಬೆಂಗಳೂರು ಏರ್ಪೋರ್ಟ್ನಲ್ಲಿ ಆರೋಪಿ ಅರೆಸ್ಟ್!
Author: Btv Kannada
Post Views: 278







