ಬೆಂಗಳೂರು : ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ವಿರುದ್ಧದ ಹಿಟ್ & ರನ್ ಆರೋಪಕ್ಕೆ ಇದೀಗ ನಟಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಹಿಟ್ & ರನ್ ಆರೋಪಕ್ಕೆ ವೀಡಿಯೋ ಮೂಲಕ ನಟಿ ದಿವ್ಯಾ ಸುರೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಅಪಘಾತಕ್ಕೆ ಪ್ರತಿಕ್ರಿಯೆಯಾಗಿ ವೀಡಿಯೋವೊಂದನ್ನು ದಿವ್ಯಾ ಸುರೇಶ್ ಹಂಚಿಕೊಂಡಿದ್ದಾರೆ.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ನಾವು ಎಲ್ಲರು ಸಮಾನರೆ ಎಂದು ಹೇಳಿದ್ದಾರೆ. ತಪ್ಪು ಯಾರೇ ಮಾಡಿರಲಿ, ಹೇಗೆ ಮಾಡಿರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಆಗೇ ಆಗುತ್ತೆ ಎಂದು ತಿಳಿಸಿದ್ದಾರೆ. ಅ.4ರ ರಾತ್ರಿ 1:30ಕ್ಕೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅ.7 ರಂದು ಗಾಯಗೊಂಡ ಮಹಿಳೆಯ ಸಂಬಂಧಿ ಕಿರಣ್ ನಟಿ ವಿರುದ್ಧ ದೂರು ದಾಖಲಿಸಿದ್ದರು.

ಕಾರು ಡಿಕ್ಕಿ ಹೊಡೆದಾಗ ಮಹಿಳೆಗೆ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ನಮ್ಮನ್ನು ನೋಡದೆ, ಕಾರು ನಿಲ್ಲಿಸದೆ ದಿವ್ಯಾ ಸುರೇಶ್ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ. ಸಿಸಿಟಿವಿ ಮೂಲಕ ಕಾರಿನ ನಂಬರ್ ಟ್ರೇಸ್ ಮಾಡಿದ್ದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ದಿವ್ಯಾ ಸುರೇಶ್‌ರನ್ನು ಕರೆಸಿ, ಕಾರನ್ನು ಸೀಜ್ ಮಾಡಿದ್ದರು. ಆದರೆ, ರಾತ್ರೋರಾತ್ರಿ ನಟಿ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಅನಿತಾಗೆ ಆಪರೇಷನ್‌ಗೆ ಎರಡು ಲಕ್ಷ ರೂ. ಹಣ ಖರ್ಚಾಗಿದೆ. ನಾನು ಕ್ಯಾಬ್ ಓಡಿಸಿ ಜೀವನ ಮಾಡುತ್ತಿದ್ದೇನೆ. ಇದುವರೆಗೂ ಸಂತ್ರಸ್ಥ ಮಹಿಳೆಯನ್ನು ನಟಿ ದಿವ್ಯಾ ಸುರೇಶ್ ಸಂಪರ್ಕಿಸಿಲ್ಲ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಕಿರಣ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಜಮೀನು ವಿವಾದಕ್ಕೆ ರಕ್ತಪಾತ – ನಡು ರಸ್ತೆಯಲ್ಲೇ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆಗೈದ ಗಂಡ!







