ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ತನಿಖಾ ದಳದ (SIT) ಪೊಲೀಸರ ತನಿಖೆಯಲ್ಲಿ ಮಹತ್ವದ ಮತ್ತು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.

ಮತದಾರರ ವೈಯಕ್ತಿಕ ವಿವರಗಳನ್ನು ಎಡಿಟ್ ಮಾಡಲು ಮತ್ತು ಬದಲಾಯಿಸಲು ಡೇಟಾ ಸೆಂಟರ್‌ಗಳನ್ನು ಬಳಸಲಾಗಿದೆ. ಒಬ್ಬ ಮತದಾರನ ಮಾಹಿತಿ ಕಳ್ಳತನ ಮಾಡಿ, ಡೇಟಾ ಬದಲಾಯಿಸಲು ₹80 ರೂಪಾಯಿ ಖರ್ಚು ಮಾಡಲಾಗಿದೆ. ಅಂದರೆ, ಒಂದು ಮತದ ಡೇಟಾ ಕಳ್ಳತನಕ್ಕೆ ₹80. 2022ರ ಡಿಸೆಂಬರ್‌ನಿಂದ 2023ರ ಫೆಬ್ರವರಿ ನಡುವೆ ಒಟ್ಟು 6,018 ಮತದಾರರ ಮಾಹಿತಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ಕಾಗಿ ಡೇಟಾ ಸೆಂಟರ್‌ಗಳಿಗೆ ಸುಮಾರು ₹4.80 ಲಕ್ಷ ಹಣ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೃತ್ಯದಲ್ಲಿ ಸ್ಥಳೀಯ ವ್ಯಕ್ತಿಗಳಾದ ಮೊಹಮ್ಮದ್ ನಿಶಾಕ್, ಅಕ್ರಂ, ಜುನೈದ್, ಅಸ್ಲಾಂ ಮತ್ತು ನದೀಂ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮೊಹಮ್ಮದ್ ನಿಶಾಕ್ ಈ ಹಿಂದೆಯೂ ಇಂತಹ ಪ್ರಕರಣದಲ್ಲಿ ತನಿಖೆ ಎದುರಿಸಿದ್ದ. SIT ತಂಡವು ಕಲಬುರಗಿ ಸೇರಿ ಹಲವೆಡೆ ದಾಳಿ ನಡೆಸಿ, ಆರೋಪಿಗಳಿಗೆ ಸಂಬಂಧಿಸಿದ ಕಚೇರಿ, ಮನೆಗಳಲ್ಲಿ ಪರಿಶೀಲನೆ ನಡೆಸಿದೆ.

ಈ ವೇಳೆ ಕೆಲ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಡಿವೈಸ್ಗಳು ಪತ್ತೆಯಾಗಿವೆ. ಈ ಅಕ್ರಮದ ಹಿಂದೆ ಬಿಜೆಪಿ ನಾಯಕರ ಕುಮ್ಮಕ್ಕು ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಆಳಂದ್ ಸೀಟ್ ವರದಿಯಲ್ಲಿ ಈ ಎಲ್ಲ ಅಂಶಗಳು ಸೇರಿವೆ. SIT ತಂಡವು ಈ ಸಂಬಂಧ ತೀವ್ರ ತನಿಖೆ ಮುಂದುವರೆಸಿದ್ದು, ಮತದಾರರ ಪಟ್ಟಿಯ ಅಕ್ರಮದಲ್ಲಿ ಭಾಗಿಯಾದ ಇತರರ ಪತ್ತೆಗೆ ಜಾಲ ಬೀಸಿದೆ.
ಇದನ್ನು ಓದಿ : ರಾಜ್ಯದಲ್ಲಿ ಪ್ರೈವೇಟ್ ಸ್ಲೀಪರ್ ಬಸ್ಗಳು ಸೇಫ್ಟಿನಾ? – ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ!







