ಬೆಂಗಳೂರು : ಪ್ರಯಾಣಿಕರೇ ಪ್ರೈವೇಟ್ ಎಸಿ ಸ್ಲೀಪರ್ ಬಸ್ಗಳಲ್ಲಿ ಹೋಗೋ ಮುನ್ನ ಹುಷಾರ್ ಆಗಿರಿ. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದಿದ್ದು, ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹಾಗಾಗಿ ಸಾವಿರಾರು ರೂ. ಖರ್ಚು ಮಾಡಿ ಪ್ರಯಾಣಿಸೋ ಮೊದಲು ಅಲರ್ಟ್ ಆಗಿರಿ.

ಪ್ರೈವೇಟ್ ಎಸಿ ಸ್ಲೀಪರ್ ಬಸ್ನಲ್ಲಿ ಸ್ವಲ್ಪ ಯಾಮಾರಿದ್ರೂ ಯಮನ ಲೋಕಕ್ಕೆ ಡೈರೆಕ್ಟ್ ಎಂಟ್ರಿ ಕೊಡ್ತೀರ. ಸುರಕ್ಷತೆ ಕೊಡದೇ ಪ್ರಯಾಣಿಕರ ಜೀವದ ಜೊತೆ ‘ಪ್ರೈವೇಟ್’ ಬಸ್ ಉದ್ಯಮಿಗಳು ಚೆಲ್ಲಾಟವಾಡ್ತಿದ್ದಾರೆ. ಕೋಟಿ ಕೋಟಿ ಬ್ಯುಸಿನೆಸ್ ಆದ್ರೂ ಖಾಸಗಿ ಬಸ್ನಲ್ಲಿ ಮೂಲ ಸೌಲಭ್ಯಗಳ ಸಾಲು ಸಾಲು ಕೊರತೆಗಳು ಕಂಡುಬಂದಿದೆ.
ಪ್ರೈವೇಟ್ ಸ್ಲೀಪರ್ ಬಸ್ಗಳಿಗೆ FC ಇರಲ್ಲ, ರೋಡ್ ಪರ್ಮಿಟ್ ಇರಲ್ಲ, ಒಂದೇ ನಂಬರ್ ಹಾಕ್ಕೊಂಡು ಎರಡರಿಂದ ಮೂರು ಬಸ್ಗಳು ಸಂಚರಿಸುತ್ತೆ. ಖಾಸಗಿ ಸ್ಲೀಪರ್ ಬಸ್ಗಳು ಒಂದೇ ನಂಬರ್, ದೇಶದ ಹಲವೆಡೆ ಓಡಾಡುತ್ತೆ. ರೋಡ್ ಟ್ಯಾಕ್ಸ್ ತಪ್ಪಿಸಲು ‘ಪ್ರೈವೇಟ್’ ಬಸ್ ರಾಜಾರೋಷವಾಗಿ ಅಕ್ರಮ ನಡೆಸುತ್ತಿದೆ. ಇದೀಗ ಜನರ ಜೀವದ ಜೊತೆ ಆಟ ಆಡೋ ಪ್ರೈವೇಟ್ ಬಸ್ಗಳಿಗೆ ಅಂಕುಶ ಯಾವಾಗ? ‘ಪ್ರೈವೇಟ್’ ದಂಧೆಯ ಲಂಚಕ್ಕೆ ರಾಜ್ಯ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

RTO ಅಧಿಕಾರಿಗಳೇ ಅಕ್ರಮಗಳ ಕೂಪ ‘ಪ್ರೈವೇಟ್’ ಮೇಲೆ ಕ್ರಮ ಕೈಗೊಳ್ಳಿ. ಪ್ರೈವೇಟ್ ಎಸಿ ಸ್ಲೀಪರ್ ಬಸ್ಗಳ ಸೇಫ್ಟಿ ಪರಿಶೀಲನೆ ಮಾಡಿ, ಖಾಸಗಿ ಸ್ಲೀಪರ್ ಬಸ್ಗಳ ಕಂಪನಿಗಳ ವಿರುದ್ಧ ದಂಡ ಹಾಕಿ ಆ್ಯಕ್ಷನ್ ತಗೊಳ್ಳಿ. ಇದೀಗ ಕರ್ನಾಟಕದಲ್ಲಿ ಪ್ರೈವೇಟ್ ಎಸಿ ಸ್ಲೀಪರ್ ಬಸ್ಗಳ ಸುರಕ್ಷತೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಪೊಲೀಸರಿಗೆ ಸೌಜನ್ಯದ ಭಾಷೆ ಗೊತ್ತೇ? – ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡ ಹೈಕೋರ್ಟ್!







