ಬಿಗ್​ಬಾಸ್​ನಲ್ಲಿ ‘S’ ಪದ ಬಳಕೆ – ದೊಡ್ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ಪೊಲೀಸ್ ವಿಚಾರಣೆ!

ಬೆಂಗಳೂರು : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ಬಾಸ್​’ ಒಂದಲ್ಲಾ ಒಂದು ಕಾನೂನು ಸಂಕಷ್ಟ ಎದುರಿಸುತ್ತಲೇ ಬಂದಿದೆ. ಈ ಬಾರಿ ಯಾವುದೇ ಕಾನೂನು ಸಮಸ್ಯೆ ಬರದಂತೆ ನೋಡಿಕೊಳ್ಳಲು ಸಾಕಷ್ಟು ತಯಾರಿ ನಡೆದಿತ್ತು. ಆದರೆ, ಇದೀಗ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿನಿಂದ ಬಿಗ್​ಬಾಸ್​ಗೆ ಮತ್ತೆ ಕಾನೂನು ತೊಡಕು ಉಂಟಾಗಿದೆ. ಪೊಲೀಸ್ ವಿಚಾರಣೆಗಾಗಿ ಅವರು ಶೀಘ್ರವೇ ಹೊರಕ್ಕೆ ಬರಬೇಕಾದ ಪರಿಸ್ಥಿತಿ ಬಂದೊದಗಬಹುದು ಎನ್ನಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಅವರು ಎಸ್ ಕೆಟಗರಿ’ ಎಂಬ ಆಕ್ಷೇಪಾರ್ಹ ಪದವನ್ನು ಬಳಸಿ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆತಲ್ ಅವರು ಈ ದೂರನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅಶ್ವಿನಿ ವಿಚಾರಣೆ ಎದುರಿಸಬೇಕಾಗಿ ಬರಹುದು.

ಆರೋಗ್ಯ ಸಮಸ್ಯೆ, ಕಾನೂನು ಸಮಸ್ಯೆ ಎದುರಾದಾಗ ಸ್ಪರ್ಧಿಗಳು ಹೊರಕ್ಕೆ ಬಂದು ಹೋದ ಉದಾಹರಣೆ ಸಾಕಷ್ಟಿದೆ. ಚೈತ್ರಾ ಕುಂದಾಪುರ ಅವರು ತಮ್ಮ ಹಳೆಯ ಕೇಸ್ ವಿಚಾರಣೆಗೆ, ಅನಾರೋಗ್ಯ ಸಮಸ್ಯೆಯಿಂದ ಈ ಮೊದಲು ಬಿಗ್ ಬಾಸ್​ನಿಂದ ಹೊರಕ್ಕೆ ಬಂದಿದ್ದರು. ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ ಸೇರಿದಂತೆ ಅನೇಕರು ಹೀಗೆಯೇ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬಂದು, ತಮ್ಮ ಅನಿವಾರ್ಯತೆ ಪೂರ್ಣಗೊಳಿಸಿ ನಂತರ ಬಿಗ್ ಬಾಸ್ ಮನೆಗೆ ಮರಳಿದ್ದಿದೆ. ಈಗ ಅಶ್ವಿನಿ ಗೌಡ ಅವರಿಗೂ ಇದೇ ರೀತಿ ಆಗಬಹುದು.

ಅಶ್ವಿನಿ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕರೆತಂದು ಪೊಲೀಸ್ ವಿಚಾರಣೆಗೆ ಅನುವು ಮಾಡಿಕೊಡಬಹುದು. ಆ ಬಳಿಕ ಅವರನ್ನು ಮರಳಿ ದೊಡ್ಮನೆಗೆ ಕಳುಹಿಸಬಹುದು. ಇಲ್ಲವೇ ಬಿಗ್ ಬಾಸ್ ಮನೆಯಲ್ಲೇ ಅಶ್ವಿನಿ ಗೌಡ ಅವರು ಕ್ಷಮೆ ಕೇಳಿ ಈ ಪ್ರಕರಣಕ್ಕೆ ಅಂತ್ಯ ಹಾಡಬಹುದು.

ಇದನ್ನೂ ಓದಿ : ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ – 20ಕ್ಕೂ ಹೆಚ್ಚು ಮಂದಿ ಸಜೀವ ದಹನ!

Btv Kannada
Author: Btv Kannada

Read More