ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಅ.28 ರಂದು ಪಿ-ಕ್ಯಾಪ್ ವಿತರಣೆಗೆ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಅ.28 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿಎಂ ಹಾಗೂ ಗೃಹ ಸಚಿವರಿಂದ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಹಿನ್ನೆಲೆ ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲೆಗಳಿಂದ ತಲಾ ಒಬ್ಬರು ಪಿಸಿ ಅಥವಾ ಹೆಚ್‌ಸಿ ಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಿ, ಅವರನ್ನು ಅ. 27 ರಂದು ಬೆಳಿಗ್ಗೆ 9.00 ಗಂಟೆಗೆ ಡಿ.ಸಿ.ಪಿ. ವಿಧಾನ ಸೌಧ ಸೆಕ್ಯೂರಿಟಿ, ವಿಧಾನ ಸೌಧದ ಮುಂದೆ, ಬ್ಯಾಂಕ್ವೆಟ್ ಹಾಲ್‌ನಲ್ಲಿ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿ ಕಳುಹಿಸಲು ಸೂಚಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ನಿಯೋಜಿಸುವ ಪಿಸಿ ಅಥವಾ ಹೆಚ್‌ಸಿ ರವರ ಪಿ-ಕ್ಯಾಪ್ ಅಳತೆಯ ವಿವರವನ್ನು ಇಂದು ಸಂಜೆ 4.00 ಗಂಟೆಯೊಳಗೆ ಐ.ಜಿ.ಪಿ, ಕೇಂದ್ರಸ್ಥಾನ, ಪೊಲೀಸ್ ಪ್ರಧಾನ ಕಛೇರಿಗೆ ಕಡ್ಡಾಯವಾಗಿ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಪ್ರಭಾಸ್-ಹನು ರಾಘವಪುಡಿ ಕಾಂಬಿನೇಷನ್ ಚಿತ್ರದ ಟೈಟಲ್ ರಿವೀಲ್ – ‘ಫೌಜಿ’ಯಲ್ಲಿ ಸೈನಿಕನಾದ ರೆಬಲ್ ಸ್ಟಾರ್!







