ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ವೃದ್ದೆಯೊಬ್ಬಳು ಮಗುವನ್ನು ಅಪಹರಿಸಿದ ಘಟನೆ ನಡೆದಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ತಾಯಿ ಜೊತೆ ಮಲಗಿದ್ದ ಮಗುವನ್ನು ವೃದ್ಧೆಯೊಬ್ಬಳು ಕಿಡ್ನಾಪ್ ಮಾಡಿದ್ದು, ತಾಯಿ ಎಚ್ಚರಗೊಂಡಾಗ ಪಕ್ಕದಲ್ಲಿ ಮಲಗಿದ್ದ ಮಗು ನಾಪತ್ತೆಯಾಗಿದೆ. ಕೂಡಲೇ ಕುಟುಂಬಸ್ಥರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಎಚ್ಚೆತ್ತಾ RPF ಸಿಸಿ ಕ್ಯಾಮೆರಾ ಚೆಕ್ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

ಸಿಸಿಟಿವಿಯಲ್ಲಿ 50 ವರ್ಷದ ವೃದ್ಧೆ ಮಗು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸೆರೆಯಾಗಿದೆ. ಆರೋಪಿ ಹಾಸನ ಮೂಲದ ನಂದಿನಿ ಎಂದು ಪೊಲೀಸರು ಗುರುತು ಪತ್ತೆ ಹಚ್ಚಿದ್ದು, ರೈಲ್ವೆ ನಿಲ್ದಾಣದಲ್ಲಿ ವೃದ್ಧೆಯನ್ನು ಬಂಧಿಸಿ ಮಗು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ರಾಜಕಾರಣಿಯಾದ ಕರುನಾಡ ಚಕ್ರವರ್ತಿ – ‘ಗುಮ್ಮಡಿ ನರಸಯ್ಯ’ ಫಸ್ಟ್ ಲುಕ್ ರಿಲೀಸ್!
Author: Btv Kannada
Post Views: 268







