ಜೊತೆಯಲ್ಲಿದ್ದ ಆಪ್ತ ಸ್ನೇಹಿನಿಂದಲೇ ರಾಬರಿ – ದೂರು ಸತ್ಯವೋ-ಸುಳ್ಳೋ? ತಲೆಕೆರೆದುಕೊಂಡು ಕೇಸಿನ ಮೂಲ ಹುಡುಕ್ತಿರೊ ಪೊಲೀಸರು!

ಬೆಂಗಳೂರು : ಜೊತೆಯಲ್ಲಿದ್ದ ಆಪ್ತ ಸ್ನೇಹಿತನೇ ಹಣ ದೋಚಿ ಪರಾರಿಯಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜೇಂದ್ರ ಗೆಳೆಯನ ಹಣವನ್ನೇ ರಾಬರಿ ಮಾಡಿದ ಐನಾತಿ.

ಆರೋಪಿ ರಾಜೇಂದ್ರ
ಆರೋಪಿ ರಾಜೇಂದ್ರ

ಶಯಾನ್ ಶೆಟ್ಟಿ ಎಂಬಾತ ಊರಿಗೆ ಹಣ ಕಳುಹಿಸಿಬೇಕೆಂದು 51 ಸಾವಿರ ನಗದು ಇಟ್ಟಕೊಂಡಿದ್ದ. ATM ಕಾರ್ಡ್ ಸರಿ ಇಲ್ಲದ ಕಾರಣ ತನ್ನ ಸ್ನೇಹಿತ ರಾಜೇಂದ್ರನಿಗೆ ಕರೆ ಮಾಡಿ ತಿಳಿಸಿದ್ದ. ಯಾವಾಗ ಹಣದ ವಿಚಾರ ಗೊತ್ತಾಯ್ತೋ ರಾಜೇಂದ್ರ ಪಕ್ಕ ಪ್ಲ್ಯಾನ್​​ ಮಾಡಿದ್ದ. ರಾಜೇಂದ್ರ ತನ್ನ 5 ಜನ ಪುಡಿರೌಡಿಗಳ ಜೊತೆ ಎಂಟ್ರಿ ಕೊಟ್ಟಿದ್ದ, ಈ ವೇಳೆ ಮಾತನಾಡುತ್ತ ಟೀ ಕುಡಿದು ಶಯಾನ್​​ ಬೈಕ್​​ನ ರಾಜೇಂದ್ರ ಕಿತ್ತು ಎಸ್ಕೇಪ್ ಆಗಿದ್ದಾನೆ.

ಶಯಾನ್ ಶೆಟ್ಟಿ
           ಶಯಾನ್ ಶೆಟ್ಟಿ

ತಕ್ಷಣ 5 ಜನರ ಗ್ಯಾಂಗ್ ರಾಜೇಂದ್ರನ ಬಳಿ ಇದ್ದ 51 ಸಾವಿರ, ಮೊಬೈಲ್ ಕಿತ್ತಿಕೊಂಡಿದ್ದಾರೆ. ಅಲ್ಲದೆ ಈ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ರೆ ಕತ್ತು ಸೀಳಿ ಕೊಲ್ಲೋದಾಗಿ ಬೆದರಿಕೆ ಹಾಕಿದ್ದ. ಈ ಘಟನೆ ಸಂಬಂಧ ಶಯಾನ್ ಶೆಟ್ಟಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ನೀಡಿದ್ದು, FIR ದಾಖಲಿಸಕೊಂಡಿರುವ ಆರೋಪಿಗಳ ಪತ್ತೆ ಮುಂದಾಗಿದ್ದಾರೆ. ಆದ್ರೆ, ಕಾಟಚಾರಕ್ಕೆ FIR ದಾಖಲಿಸಿ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಬರಿ ಮಾಡಿದ ಗ್ಯಾಂಗ್ ಏರಿಯಾದಲ್ಲೇ ಓಡಾಡುತ್ತಿದ್ದಾರೆ ಸುಮ್ನಿದ್ದಾರೆಂಬ ಆರೋಪವಿದೆ.

ದೂರು ಸತ್ಯವೋ-ಸುಳ್ಳೋ ಅನ್ನೋ ಅನುಮಾನ : ಪೊಲೀಸರೇ ತಲೆಕೆರೆದುಕೊಂಡು ಇದೀಗ ಕೇಸಿನ ಮೂಲ ಹುಡುಕ್ತಿದ್ದಾರೆ. ಕಳೆದ ಹತ್ತು ದಿನದ ಹಿಂದೆ ಒಂದು ಸುಲಿಗೆ ಕೇಸು ಬ್ಯಾಟರಾಯನಪುರ ಠಾಣೆಯಲ್ಲಿ ದಾಖಲಾಗುತ್ತೆ. ಶಯನ್ ಶೆಟ್ಟಿ ಎಂಬಾತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 58 ಬಸ್ ಸ್ಟ್ಯಾಂಡ್​ನಲ್ಲಿ ನಿಂತಿದ್ದಾಗ ರಾಬರಿ ಆಯ್ತು. ಸ್ನೇಹಿತ ರಾಜೇಂದ್ರ ಹಾಗೂ ಆತನ ಸ್ನೇಹಿತರು 50 ಸಾವಿರ ದೋಚಿದರು. ದೂರು ತೆಗೆದುಕೊಳ್ಳಿ ಅಂತ ಶಯನ್ ಕಂಪ್ಲೆಂಟ್ ಕಾಪಿ ಕೊಟ್ಟಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜೇಂದ್ರನಿಗೆ ಕಾಲ್ ಮಾಡ್ತಾರೆ. ಆದ್ರೆ, ರಾಜೇಂದ್ರ ಹೇಳೋ ವಿಚಾರಾನೇ ಬೇರೆ.

ಸರ್, ಶಯನ್ ಶೆಟ್ಟಿ ರಾಬರಿ ಮಾಡೋಣ ಬಾ ಅಂತ ಕರೆಸ್ಕೊಂಡಿದ್ದ. ಆದ್ರೆ, ನಾನು ಅದನ್ನ ಮಾಡಲ್ಲ ಅಂತ ಹೇಳಿದ್ದೆ. ಅವನ ಬಳಿ ಇರೋ ಬೈಕು ತೆಗೆದುಕೊಂಡಿದ್ದೀನಿ. ಆದರೆ ಅದನ್ನೂ ನಾನು ಶಯನ್ ಹೇಳಿದ್ದ ಅಂಗಡಿಯ ಬಳಿಯೇ ಬಿಟ್ಟಿದ್ದೀನಿ. ಶಯನ್ ಸುಳ್ಳು ಕೇಸನ್ನ ಕೊಟ್ಟಿದ್ದಾನೆ. ಇಲ್ಲಿ ನಂದೇನು ತಪ್ಪಿಲ್ಲ ಎಂದು ರಾಜೇಂದ್ರ ಪೊಲೀಸರ ಮುಂದೆ ಹೇಳಿದ್ದಾನೆ. ಈ ಇಬ್ಬರ ಹೇಳಿಕೆ ಕೇಳಿ ಇದೀಗ ಪೊಲೀಸರೇ ತಲೆಕೆರೆದುಕೊಂಡಿದ್ದಾರೆ. ಸದ್ಯ, ಶಯನ್​ನ ದೂರನ್ನ ಆಧರಿಸಿ ಪೊಲೀಸರು ಸತ್ಯದ ಎಳೆ ಬಿಡಿಸೋಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಮೈಸೂರಲ್ಲಿ ಭ್ರೂಣ ಹತ್ಯೆ ಮಾಡ್ತಿದ್ದ ಮನೆ ಮೇಲೆ ಆರೋಗ್ಯ ಇಲಾಖೆ ರೇಡ್ – ಆರೋಪಿಗಳು ಅರೆಸ್ಟ್!

Btv Kannada
Author: Btv Kannada

Read More