ಕಲಬುರಗಿ : ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಪಿಎಸ್‌ಐ ಹಗರಣ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಿವ್ಯಾ ಹಾಗರಗಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಪಿಎಸ್‌ಐ ಹಗರಣ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಜು ಲೆಂಗಟಿ, ಶಿವಶರಣಪ್ಪ ಮಶಾಳ, ರವೀಂದ್ರ ಮಾನಕರ, ಭಗವಾನ ಜಾಕೋರಿ, ಮಲ್ಲಿನಾಥ ಮಂಗಲಗಿ, ಸಂಗಮೇಶ ನಾಗನಹಳ್ಳಿ ಅವರನ್ನು ಬಂಧಿತ ಆರೋಪಿಗಳು.
ದಿವ್ಯಾ ಹಾಗರಗಿ ತನ್ನ ಮನೆಯಲ್ಲಿ ಗುಂಪು ಸೇರಿಸಿ ಜೂಜಾಟ ನಡೆಸುತ್ತಿರುವ ಕುರಿತಾಗಿ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಸರ್ಕಾರಿ ನೌಕರ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದು, ಸ್ಥಳದಲ್ಲೇ 42 ಸಾವಿರ ರೂಪಾಯಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕಲಬುರಗಿ ನಗರದ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಿಲಿಂಡರ್ ಸ್ಪೋಟ: ಕಲಬುರಗಿಯಲ್ಲಿ ಮನೆ ಬೆಂಕಿಗಾಹುತಿ; ₹1 ಲಕ್ಷ ನಗದು, ಚಿನ್ನಾಭರಣ ಸುಟ್ಟು ಕರಕಲು
Author: Btv Kannada
Post Views: 355







