ನಟಿ ಸಮಂತಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ತಮ್ಮ ಬದುಕಿನ ಉತ್ತಮ ಕ್ಷಣಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ವೃತ್ತಿ ಬದುಕಿನಲ್ಲಿ ಯಶಸ್ಸಿ ಕಂಡಿರುವ ನಟಿ ವೈಯಕ್ತಿಕ ಬದುಕಿನಲ್ಲಿ ಪೆಟ್ಟು ತಿಂದಿದ್ದರು. ನಾಗ ಚೈತನ್ಯ ಜೊತೆಗಿನ ವಿಚ್ಚೇದನ ಅವರ ಜೀವನದ ಅತ್ಯಂತ ಕರಾಳ ನೆನಪು. ಈ ನೋವಿನಿಂದ ಕುಗ್ಗಿ ಹೋಗಿದ್ದ ಸಮಂತಾ ತನ್ನ ವೈಯಕ್ತಿಕ ಜೀವನವನ್ನು ಮತ್ತೆ ಸರಿ ದಾರಿಗೆ ತರುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅದೆಂತಹದ್ದೇ ವದಂತಿಗಳು ಹರಿದಾಡಿದರೂ ಬಹಿರಂಗವಾಗಿ ಪ್ರತಿಕ್ರಿಯಿಸದೆ ಮುನ್ನಡೆಯುತ್ತಿದ್ದಾರೆ. ಮತ್ತೆ ತಪ್ಪುಗಳನ್ನು ಮಾಡದೇ ತಮ್ಮದೇ ಶೈಲಿಯಲ್ಲಿ ತನ್ನ ಜೀವನವನ್ನು ಸರಿಪಡಿಸಿಕೊಳ್ಳುವುದರೆಡೆ ಗಮನ ಕೊಡುತ್ತಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನ ಪಡೆದು ಬೇರೆ ಬೇರೆ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ, ಸಮಂತಾ ವಿಚ್ಚೇದನ ಇನ್ನೂ ಚರ್ಚೆಯಾಗುತ್ತಲೇ ಇದೆ. ಇನ್ನೂ ಕಾರಣಗಳನ್ನು ಕೇಳುವುದಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಇಬ್ಬರೂ ಈ ಬಗ್ಗೆ ನಿಖರ ಕಾರಣ ಹೇಳದೆ ಮೌನವಹಿಸಿದ್ದಾರೆ. ಇತ್ತೀಚೆಗೆ ಸಮಂತಾ ಎನ್‌ಡಿಟಿವಿ ಇವೆಂಟ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ವಿಚ್ಚೇದನ ಹಾಗೂ ಅದರಿಂದ ಅವರು ಅನುಭವಿಸಿದ ನೋವುಗಳ ಬಗ್ಗೆ ಮಾತಾಡಿದ್ದಾರೆ.
ವಿಚ್ಚೇದನದ ಬಗ್ಗೆ ತಮ್ಮ ಜೀವನ ಹೇಗಿದೆ? ಪ್ರಸ್ತುತ ಸನ್ನಿವೇಶದಲ್ಲಿ ಸಮಂತಾ ವೈಯಕ್ತಿಕ ಹಾಗೂ ವೃತ್ತಿ ಜೀವನ ಹೇಗಿದೆ ಅನ್ನೋದನ್ನು ಈ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. “ಕ್ಯಾಮೆರಾ ಮುಂದೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಕಷ್ಟ. ಸದ್ಯದ ಮಟ್ಟಿಗೆ ಇದು ‘ವರ್ಕ್ ಇನ್ ಪ್ರೋಗ್ರೆಸ್’ ಹಂತದಲ್ಲಿದೆ. ಇದರ ಬಗ್ಗೆ ನಾನು ಹೆಚ್ಚೇನು ಹೇಳುವುದಿಲ್ಲ. ನನ್ನ ಜೀವನದಲ್ಲಿ ಬಗೆಹರಿಸಿಕೊಳ್ಳಬೇಕಾಗಿದ ಹಲವು ವಿಷಯಗಳಿವೆ. ನನಗೆ ಮೊದಲು ಅವುಗಳ ಬಗ್ಗೆ ಮಾತನಾಡಬೇಕು ಅಂತ ಅನಿಸಿತು” ಎಂದು ಸಮಂತಾ ಈ ಇವೆಂಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದೇ ವೇದಿಕೆ ಮೇಲೆ ತಾನು ತೆಗೆದುಕೊಂಡ ನಿರ್ಧಾರಗಳು ಪರಿಪೂರ್ಣವಾಗಿರಲಿಲ್ಲ. ನಾನು ಪರಿಪೂರ್ಣ ವ್ಯಕ್ತಿ ಅಂತ ಹೇಳುವುದಿಲ್ಲ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. “ನಾನು ಅನೇಕ ತಪ್ಪುಗಳನ್ನು ಮಾಡಿರುವ ಸಾಧ್ಯತೆಯಿದೆ. ಅದು ನನ್ನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಆ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ನಾನು ಪ್ರಯತ್ನ ಪಟ್ಟಿದ್ದೇನೆ. ವೈಯಕ್ತಿಕ ಹಾಗೂ ವೃತ್ತಿಪರವಾಗಿ ನಾನು ನನ್ನನ್ನು ತಿದ್ದುಕೊಳ್ಳುತ್ತಿದ್ದೇನೆ” ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಹಾಗೇ ನನ್ನ ಬದುಕಿನಲ್ಲಿ ಇರುವ ವ್ಯಕ್ತಿ, ಇಲ್ಲವೇ ನನಗೆ ತಿಳಿದಿರುವ ವ್ಯಕ್ತಿಯ ಬಗ್ಗೆ ನಾನು ಈಗ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ. ಸೂಕ್ತ ಸಮಯ ಬಂದಾಗ ಅದರ ಬಗ್ಗೆ ಮಾತಾಡುತ್ತೇನೆ. ನನ್ನನ್ನು ಹತ್ತಿರದಿಂದ ನೋಡಿದವರಿಗೆ ನನ್ನ ಸಮಸ್ಯೆಗಳು ಅರ್ಥ ಆಗುತ್ತವೆಂದು ಸಮಂತಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ವಿಚ್ಚೇದನ, ಆರೋಗ್ಯ ಸಮಸ್ಯೆ ಬಗ್ಗೆನೂ ಸಮಂತಾ ಮಾತಾಡಿದ್ದಾರೆ. “ವಿಚ್ಚೇದನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನನ್ನನ್ನು ತೀವ್ರವಾಗಿ ಟ್ರೋಲ್ ಮಾಡಲಾಯಿತು. ನನ್ನ ವಿಚ್ಛೇದನ ಸುದ್ದಿಯನ್ನು ಕೆಲವರು ಸಂಭ್ರಮಿಸಿದರು. ನನ್ನ ಜೀವನದ ಬಗ್ಗೆ ಅವರೇ ತೀರ್ಪುಗಳನ್ನು ನೀಡುತ್ತಿದ್ದರು.
ಆ ತೀರ್ಪುಗಳು ತುಂಬಾ ನೋವು ಕೊಟ್ಟಿವೆ” ಎಂದು ನಟಿ ಸಮಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಸಮಂತಾ ರುತ್ ಪ್ರಭು ನಟಿಯಾಗಿ ಚಿತ್ರರಂಗದಿಂದ ದೂರವಿದ್ದಾರೆ. ಆದರೆ, ನಿರ್ಮಾಪಕಿಯಾಗಿ ಅವರು ನಿರ್ಮಿಸಿದ ‘ಶುಭಂ’ ಸಿನಿಮಾ ಗೆದ್ದಿದೆ. ಈ ಸಿನಿಮಾದ ಯಶಸ್ಸಿನಲ್ಲಿ ಅಲೆದಾಡುತ್ತಿದ್ದಾರೆ. ಇನ್ನು ನಟನೆ ವಿಷಯಕ್ಕೆ ಬಂದರೆ, ಸದ್ಯ ಅವರೊಂದು ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದು, ಶೀಘ್ರ ಹೊಸ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ.
ಇದನ್ನು ಓದಿ : ಡಿಕೆಶಿ ‘ಸಿಎಂ’ ಕನಸಿಗೆ ಯತೀಂದ್ರ ಚೆಕ್ಮೇಟ್.. ನವೆಂಬರ್ ಕ್ರಾಂತಿ ಬೆನ್ನಲ್ಲೇ ಸಿದ್ದರಾಮಯ್ಯ ಬಳಿಕ ‘ಸಾಹುಕಾರ್’ಗೆ ಲೀಡರ್ಶಿಫ್!







