ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ: ಮಹಾ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿ, ಝೇಂಕರಿಸಿದ ‘ಉಘೇ ಮಾದಪ್ಪ’ ಘೋಷಣೆ..!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಅಂಗವಾಗಿ ಇಂದು ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥರಾದರು.

ಮಹದೇಶ್ವರ ಬೆಟ್ಟದ ತುಂಬೆಲ್ಲಾ ಭಕ್ತರು ದೈವಿಕ ಹರ್ಷದಲ್ಲಿ “ಉಘೇ ಉಘೇ ಮಾದಪ್ಪ” ಎಂದು ಜೈಕಾರ ಹಾಕುತ್ತಾ ಸಾಗಿದ್ದು, ಭಕ್ತಿ ಮತ್ತು ಸಂಭ್ರಮದ ವಾತಾವರಣ ಸೃಷ್ಟಿಸಿತ್ತು. ರಥೋತ್ಸವದಲ್ಲಿ ಮಾದಪ್ಪನ ಮೂಲ ರಥದ ಜೊತೆಗೆ ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳು ಕೂಡ ಮೆರವಣಿಗೆಯಲ್ಲಿ ಸಾಗಿದವು.

ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅವರು ರಥೋತ್ಸವದ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿ ಪೂಜೆಗಳನ್ನು ಸಲ್ಲಿಸಿದರು.

ವಿವಿಧ ಜಾನಪದ ಕಲಾತಂಡಗಳು ತಮ್ಮ ಪ್ರದರ್ಶನಗಳ ಮೂಲಕ ರಥೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿದವು. ದೂರದ ಊರುಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ಮಹಾ ರಥವನ್ನು ಎಳೆದು ಪುನೀತರಾದರು.

ಇದನ್ನು ಓದಿ : ನಾಗರಾಜ ಸೋಮಯಾಜಿ ಹೊಸ ಸಿನಿಮಾ ‘ದೇವಿ ಮಹಾತ್ಮೆ’…ದೀಪಾವಳಿಗೆ ಟೈಟಲ್ ಪೋಸ್ಟರ್ ರಿಲೀಸ್..!

Btv Kannada
Author: Btv Kannada

Read More