ಚಾಮರಾಜನಗರ : ಬಂಡೀಪುರದಲ್ಲಿ ಪ್ರತಿನಿತ್ಯದಂತೆ ಪ್ರವಾಸಿಗರು ಜಂಗಲ್ ಸಫಾರಿಗೆ ತೆರಳಿದ್ದರು. ಸಫಾರಿ ವಾಹನವು ದಟ್ಟ ಕಾಡಿನೊಳಗಿನ ರಸ್ತೆಯಲ್ಲಿ ಸಾಗುತ್ತಿದ್ದಾಗ, ಎದುರುಗಡೆಯೇ ಒಂದು ಬೃಹತ್ ಹುಲಿ ಪ್ರತ್ಯಕ್ಷವಾಗಿದೆ. ಕೆಲಕಾಲ ರಸ್ತೆಯ ಮಧ್ಯಭಾಗದಲ್ಲಿ ನಡೆದಾಡಿದ ಹುಲಿ, ಸುತ್ತಲಿನ ಪರಿಸರವನ್ನು ಗಮನಿಸಿ, ನಂತರ ನಿಧಾನವಾಗಿ ಪೊದೆಗಳತ್ತ ಸಾಗಿದೆ.

ಈ ಅನಿರೀಕ್ಷಿತ ದೃಶ್ಯವನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಹುಲಿಯ ಈ ವಿಹಂಗಮ ನೋಟವನ್ನು ಸಫಾರಿಗೆ ಹೋಗಿದ್ದವರೆಲ್ಲರೂ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಯಾವುದೇ ಭಯವಿಲ್ಲದೆ ಹುಲಿಯು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಸಫಾರಿ ವೇಳೆ ಹುಲಿಗಳು ಆಗಾಗ್ಗೆ ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದು, ವನ್ಯಜೀವಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಇದು ಸ್ವರ್ಗವಾಗಿದೆ. ಸುಮಾರು ಒಂದು ನಿಮಿಷದ ಅವಧಿಯ ಈ ವಿಡಿಯೋವನ್ನು ಹಲವು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವಿಡಿಯೋಗೆ ಸಾವಿರಾರು ವೀಲ್ಸ್ ಬಂದಿವೆ.
ಇದನ್ನು ಓದಿ : ದೀಪಾವಳಿ ಹಬ್ಬದ ದಿನವೇ ಶೀಲ ಶಂಕಿಸಿ ಪತ್ನಿಯ ಹತ್ಯೆ- ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಪಾಪಿ ಪತಿರಾಯ!







