ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ಘನಘೋರ ಘಟನೆಯೊಂದು ನಡೆದಿದೆ, ಮೂವರು ಯುವಕರು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕಳೆದ ರಾತ್ರಿ, ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ವಾಸವಿದ್ದ ಕಲ್ಕತ್ತಾ ಮೂಲದ ಮಹಿಳೆಯ ಬಾಡಿಗೆ ಮನೆಯೊಳಗೆ ನುಗ್ಗಿದ ಮೂವರು ಯುವಕರು ಈ ಕೃತ್ಯ ಎಸಗಿದ್ದಾರೆ. ಯುವಕರು ಮದ್ಯಪಾನದ ಮತ್ತಿನಲ್ಲಿದ್ದರು ಎಂದು ತಿಳಿದುಬಂದಿದೆ. ಪೀಡಿತ ಮಹಿಳೆ ನೀಡಿದ ದೂರಿನ ಮೇರೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ನಂತರ ಆರೋಪಿಗಳು ಸ್ಥಳದಿಂದ ನಾಪತ್ತೆಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿ ಹುಡುಕುತ್ತಾ ಇದ್ದಾರೆ.

ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ಹಾಜರುಪಡಿಸಿದ್ದಾರೆ. ಈ ಘೋರ ಕೃತ್ಯದಿಂದಾಗಿ ಗಂಗೊಂಡನಹಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿದ್ದಾರೆ.
ಇದನ್ನು ಓದಿ : ಮಂತ್ರಾಲಯದಲ್ಲಿ ಧರ್ಮಪತ್ನಿಯೊಂದಿಗೆ ರಾಯರ ಆಶೀರ್ವಾದ ಪಡೆದ ಡಿ ಕೆ ಶಿವಕುಮಾರ್;







