ಮಂತ್ರಾಲಯ : ರಾಯರ ಸನ್ನಿಧಿ ಎಂದರೆ ಸದಾಕಾಲ ಭಕ್ತರಿಂದ ತುಂಬಿ ತುಳುಕುವ ಪವಿತ್ರ ಕ್ಷೇತ್ರ. ಇಂತಹ ಮಂತ್ರಾಲಯದಲ್ಲಿ ಇಂದು ಅಪಾರ ಸಂಖ್ಯೆಯ ಭಕ್ತರ ನಡುವೆ, ಡಿ ಕೆ ಶಿವಕುಮಾರ್ ತಮ್ಮ ಧರ್ಮಪತ್ನಿಯ ಸಮೇತ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಪಡೆದರು.

ದರ್ಶನದ ನಂತರ, ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದ ಮುಂದೆ ಕುಳಿತು, ತಮ್ಮ ವೈಯಕ್ತಿಕ ಸುಖ-ಶಾಂತಿಯ ಜೊತೆಗೆ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಮತ್ತು ಎಲ್ಲರ ಸುಖ-ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನಾನಂತರ ಮಾತನಾಡಿದ ಡಿ ಕೆ ಶಿವಕುಮಾರ್ ಮಂತ್ರಾಲಯದಲ್ಲಿ ಪತ್ನಿ ಸಮೇತ ದರ್ಶನ ಮಾಡುವ ಸೌಭಾಗ್ಯ ದೊರೆತದ್ದು ತಮ್ಮ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಡಿ ಕೆ ಶಿವಕುಮಾರ್ ಹಾರೈಸಿದ್ದಾರೆ. ಮಂತ್ರಾಲಯಕ್ಕೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾತ್ರವಲ್ಲದೆ, ಲೋಕ ಕಲ್ಯಾಣಕ್ಕಾಗಿ ಡಿ ಕೆ ಶಿವಕುಮಾರ್ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದಾರೆ.

ಇದನ್ನು ಓದಿ : ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೇ ದಿನ – ‘ಶಕ್ತಿ’ ದೇವತೆ ಕಣ್ತುಂಬಿಕೊಳ್ಳಲು ಕಿ.ಮೀಗಟ್ಟಲೇ ಭಕ್ತರ ಸಾಲು!







