ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೇ ದಿನ – ‘ಶಕ್ತಿ’ ದೇವತೆ ಕಣ್ತುಂಬಿಕೊಳ್ಳಲು ಕಿ.ಮೀ​​ಗಟ್ಟಲೇ ಭಕ್ತರ ಸಾಲು!

ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು ಕೊನೇ ದಿನವಾಗಿದೆ. ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಅಕ್ಟೋಬರ್​ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ.

ಇಂದು ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದ್ದರಿಂದ ಕೊನೇ ದಿನದಂದು ಲಕ್ಷ ಲಕ್ಷ ಭಕ್ತರು ಹರಿದುಬರುತ್ತಿದ್ದು, ದೇವಿ ಸನ್ನಿಧಾನದಲ್ಲಿ ಧರ್ಮದರ್ಶನದ ಸಾಲು 8 ಕಿಲೋಮೀಟರ್​ಗಿಂತ ಹೆಚ್ಚಿದೆ. ಬರೋಬ್ಬರಿ 4 ಲಕ್ಷ ಜನ ಹಾಸನಾಂಬೆ ದರ್ಶನಕ್ಕೆ 1,000 ರೂ, 300 ರೂ ಟಿಕೆಟ್​​ ಪಡೆದಿದ್ದಾರೆ. ಕೊನೆಯ ದಿನ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದ್ದು ಇಂದು ಸಂಜೆ 7ಕ್ಕೆ ಹಾಸನಾಂಭೆಯ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿ ತೆರೆ ಬೀಳಲಿದೆ.

ಇಂದು ರಾತ್ರಿ ದೇವಸ್ಥಾನದ ಬಾಗಿಲು ಮು  ಚ್ಚಲಿದ್ದು, ಮತ್ತೆ ಹಾಸನಾಂಬೆ ದೇವಿಯ ದರ್ಶನ ಮುಂದಿನ ವರ್ಷ ಸಿಗಲಿದೆ. 1 ವರ್ಷದ ಬಳಿಕವೂ ದೀಪ, ಪ್ರಸಾದ ಎಲ್ಲವೂ ಹಾಗೇಯೇ ಉಳಿಯುವುದು ಇಲ್ಲಿನ ದೇವಿಯ ವಿಶೇಷ.

ಇದನ್ನೂ ಓದಿ : ಮಂಗಳೂರಿನಲ್ಲಿ ಅಕ್ರಮ ಗೋಸಾಗಾಟ.. ಆರೋಪಿ ಮೇಲೆ ಪೊಲೀಸರ ಗುಂಡೇಟು, ಓರ್ವ ವಶ, ಇನ್ನೋರ್ವ ಪರಾರಿ..!

Btv Kannada
Author: Btv Kannada

Read More