ಕೋಲಾರ : ಯುವಕನೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆಟೋದಲ್ಲಿ ಶವ ಬಿಸಾಕಿ ಪರಾರಿಯಾಗಿರುವ ಘಟನೆ ಕೋಲಾರ ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ನಡೆದಿದೆ.

ಬಂಗಾರಪೇಟೆಯ ಎಳೆಸಂದ್ರ ಗ್ರಾಮದ 26 ವರ್ಷದ ಅಫ್ರಿದ್ ಕೊಲೆಯಾದ ಯುವಕ. ದುಷ್ಕರ್ಮಿಗಳು ಅಫ್ರಿದ್ ಅನ್ನು ಕೊಲೆ ಮಾಡಿ ಆಟೋದಲ್ಲಿ ಶವ ಬಿಸಾಕಿ ಎಸ್ಕೇಪ್ ಆಗಿದ್ದು, ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ
Author: Btv Kannada
Post Views: 480







