ಬೆಂಗಳೂರು : ಬೆಂಗಳೂರಿನಲ್ಲಿ ಮಧ್ಯರಾತ್ರಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹೆಣ್ಣೂರು ಬಡಾವಣೆಯಲ್ಲಿ ರೌಡಿಗಳು ಲಾಂಗ್ನಿಂದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದು, ಏರಿಯಾದಲ್ಲಿ ಕಿಡಿಗೇಡಿಗಳ ದಾಂಧಲೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಐವರು ಯುವಕರ ಗುಂಪೊಂದು ಈ ಕೃತ್ಯವೆಸಗಿದ್ದು, ಇದೀಗ ಮೂವರು ಕಿಡಿಗೇಡಿಗಳನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಇಬ್ಬರು ಯುವಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪುಂಡರು ಸರ್ವಜ್ಞನಗರ ನಿವಾಸಿಗಳು ಎನ್ನಲಾಗಿದೆ.

ಅಮೀನ್ ಷರೀಫ್, ಸೈಯದ್ ಅರ್ಬಾಸ್, ಶೀದ್ ಖಾದರ್ ಮೂವರು ಬಂಧಿತ ಆರೋಪಿಗಳು. ತನಿಖೆ ವೇಳೆ ಆರೋಪಿಗಳು ಏರಿಯಾದಲ್ಲಿ ಹವಾ ಮೇಂಟೇನ‌್ ಮಾಡಲು ಕೃತ್ಯವೆಸಗಿದ್ದಾರೆ ಎಂದು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಕಿರಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದೆ.
ಇದನ್ನೂ ಓದಿ : ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಮುಖ್ಯ ಶಿಕ್ಷಕ – ವಿಡಿಯೋ ವೈರಲ್!







